ಚನ್ನಪಟ್ಟಣ: ಇಲ್ಲಿನ ವಂದಾರಗುಪ್ಪೆ ಹಾರಿಜನ್ ಶಾಲೆಯ ಶಾಲಾ ಸಂಸ್ಥಾಪಕ ದಿನವನ್ನು ಪರಿಸರ ದಿನದ ಅಂಗವಾಗಿ ಹಸಿರು ದಿನವಾಗಿ ಆಚರಿಸಲಾಯಿತು. ಶಾಲಾಮಕ್ಕಳು ಗಿಡ ನೆಡುವ ಜತೆಗೆ ಹಸಿರು ಬಟ್ಟೆಗಳನ್ನು ತೊಟ್ಟು ಪರಿಸರ ದಿನವನ್ನು ಸಂಭ್ರಮಿಸಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾಮಕ್ಕಳನ್ನು ಕೆಂಗಲ್ ಹನುಮಂತಯ್ಯ ಸಸ್ಯೋದ್ಯಾನಕ್ಕೆ ಕರೆದೊಯ್ದ ಅಲ್ಲಿನ ಗಿಡ ಮರ ಮತ್ತು ಪ್ರಾಣಿಪಕ್ಷಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಶಾಲೆಯ ಕಾರ್ಯದರ್ಶಿ ಪಾರ್ಥಸಾರಥಿ ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪರಿಸರ ಉಳಿಸಿ ಬೆಳೆಸುವ ಬಗ್ಗೆ ವಿದ್ಯಾರ್ಥಿಗಳು ಪ್ರತಿಜ್ಞೆ ಕೈಗೊಂಡರು.