ರಾಮನಗರ: ಜಿಲ್ಲಾ ರಾಣಾ ಪ್ರತಾಪ ಸಿಂಹ ರಜಪೂತ್ ಮಹಾಸಭಾ ಸಂಘದ ಅಧ್ಯಕ್ಷರಾಗಿ ವಾಸುದೇವ ಸಿಂಗ್ ಅವರು ಆಯ್ಕೆಯಾಗಿದ್ದಾರೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಾರ್ಡ್ ಆವರಣದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ವಾಸುದೇವ ಸಿಂಗ್ ಅವರನ್ನು ಸರ್ನಾನುಮತದಿಂದ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಪದಾಧಿಕಾರಿಗಳಾದ ಕೃಷ್ಣಸಿಂಗ್, ಗಣೇಶ್ಸಿಂಗ್, ಮಂಜುನಾಥಸಿಂಗ್, ನಾಗೇಂದ್ರ, ಅಮರನಾಥ್ ಸಿಂಗ್, ನಾಗರಾಜ ಸಿಂಗ್, ಲಕ್ಷ್ಮಣ್ಸಿಂಗ್, ಜೈಸಿಂಗ್, ಬಾಲಾಜಿಸಿಂಗ್, ರಾಜಾಸಿಂಗ್, ಮತ್ತಿತರರು ಭಾಗವಹಿಸಿದ್ದರು.
ಅಪಘಾತ: ಬೈಕ್ ಸವಾರ ಸಾವು
ರಾಮನಗರ: ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ತಿಮ್ಮಸಂದ್ರ ಗ್ರಾಮದ ಬಳಿ ಶನಿವಾರ ಮುಂಜಾನೆ ನಡೆದಿದೆ. ತಿಮ್ಮಸಂದ್ರ ಗ್ರಾಮದ ಶಿವರಾಜು(18) ಮೃತ ಯುವಕ. ಟೊಯೋಟಾ ಕಾರ್ಖಾನೆಯ ಉದ್ಯೋಗಿಯಾಗಿದ್ದ ಮೃತನು ಕೆಲಸಕ್ಕಾಗಿ ಬೈಕ್ನಲ್ಲಿ ರಾಮನಗರ-ಮಾಗಡಿ ರಸ್ತೆಯ ತಿಮ್ಮಸಂದ್ರ ಗೇಟ್ ಬಳಿ ತೆರಳುತ್ತಿದ್ದಾಗ ಎದುರಿನಿಂದ ಬಂದ್ ಸ್ಕಾರ್ಪಿಯೋ ಕಾರು ಡಿಕ್ಕಿಯೊಡೆದಿದೆ. ಅಪಘಾತದಲ್ಲಿ ಶಿವರಾಜುವಿನ ಮೇಲೆ ಕಾರು ಹರಿದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಬೈಕ್ನ ಹಿಂಬದಿ ಸವಾರ ಕೂಡ ಶಿವರಾಜು(20) ಎಂಬಾತನಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಆತನನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.