ಬನ್ನಿಮಹಂಕಾಳಿ ಕರಗ ಮಹೋತ್ಸವ

Updated on: 

ರಾಮನಗರ: ನಗರದ ಆದಿ ದೇವತೆ  ಬನ್ನಿಮಹಂಕಾಳಿ ಅಮ್ಮನವರ ಕರಗಕ್ಕೆ ಮಂಗಳವಾರ ಸಂಜೆ ಚಾಲನೆ ದೊರೆತಿದ್ದು, ಬುಧವಾರ ಬೆಳಗ್ಗೆ ಅಗ್ನಿ ಕೊಂಡ ಪ್ರವೇಶದ ನಂತರ ಮುಕ್ತಾಯಗೊಳ್ಳಲಿದೆ.
ನಗರದ ಮಂಡಿ ಪೇಟೆಯಲ್ಲಿರುವ ಅಮ್ಮನವರ ದೇವಾಲಯದಲ್ಲಿ ಕರಗ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆಯಿಂದಲೇ ಮಹಿಳೆಯರು ತಂಬಿಟ್ಟಿನ ಆರತಿಗಳನ್ನು ಅರ್ಪಿಸಿ, ಪೂಜೆ ಸಲ್ಲಿಸಿದರು.  
ಮಂಗಳವಾರ ರಾತ್ರಿ ಕರಗ ಧಾರಣೆ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಕರಗ ಮೆರವಣಿಗೆಯಲ್ಲಿ  ಸಂಚರಿಸಿ, ಬುಧವಾರ ಬೆಳಗ್ಗೆ 10ಕ್ಕೆ ಅಗ್ನಿಕೊಂಡ ಪ್ರವೇಶ ನಡೆಯಲಿದೆ. ಕರಗ ಮಹೋತ್ಸವದ ಅಂಗವಾಗಿ ನಗರದ ಎಲ್ಲ ಬೀದಿಗಳಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಕರಗ ಸಂಚರಿಸುವ ಮಾರ್ಗಗಳಲ್ಲಿ ಹೂವಿನ ಹಾಸುಗಳಿಂದ ಅಲಂಕರಿಸಿ ಕರಗ ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.
ಜು.10ರಂದು ಗುರುವಾರ ಮಧ್ಯಾಹ್ನ 12 ರಿಂದ 3ರವರೆಗೆ ಅಮ್ಮನವರ ದೇವಾಲಯದಲ್ಲಿ ಸಿಡಿ ಉತ್ಸವ ನಡೆಯಲಿದೆ. ಜು.11 ರಂದು ಮಧ್ಯಾಹ್ನ 12ಕ್ಕೆ  ಅಮ್ಮನವರ ಸನ್ನಿಧಾನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಿದೆ. ಅಂದು ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ದೇವಿಯವರ ವೈಭವೋಪೇತ ಮುತ್ತಿನ ಪಲ್ಲಕ್ಕಿಯ ಉತ್ಸವ ಏರ್ಪಡಿಸಲಾಗಿದೆ ಎಂದು ದೇವಾಲಯದ ಸೇವಾ ಸಮಿತಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com