ರಾಮನಗರ: ಕನಕಪುರದ ಸಂಗಮ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಾನಾ ವಿಷಯಗಳಲ್ಲಿ ಎರಡು ವರ್ಷಗಳ ಐ.ಟಿ.ಐ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ತರಬೇತಿ ವಿಭಾಗದ 2ನೇ ವರ್ಷದ ತರಬೇತಿಯ ಪರೋಕ್ಷ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಸಂಗಮ ರಸ್ತೆ, ಕನಕಪುರ ಇಲ್ಲಿ ಅರ್ಜಿ ಪಡೆದು, ಜು.18ರೊಳಗೆ ಸಲ್ಲಿಸಬಹುದು. ಕೌನ್ಸೆಲಿಂಗ್ ಮತ್ತು ಪ್ರವೇಶವು ಜು.21 ರಿಂದ ಪ್ರಾರಂಭವಾಗುತ್ತದೆ. ಮಾಹಿತಿಗೆ ಕಚೇರಿಯನ್ನು ಅಥವಾ ದೂ: 080-27524561, ಮೊ: 888431447 ಸಂಪರ್ಕಿಸಬಹುದು ಎಂದು ತರಬೇತಿ ಕೇಂದ್ರದ ಪ್ರಾಂಶುಪಾಲ ಎಚ್.ಎಸ್.ಗೋವಿಂದ ವತ್ಸ ತಿಳಿಸಿದ್ದಾರೆ.