ಜಾನಪದ ಕಲಾಮೇಳ ಇಂದು

Updated on: 

ಚನ್ನಪಟ್ಟಣ: ಬೆಳ್ಳಿ ಬೆಳದಿಂಗಳು ಟ್ರಸ್ಟ್  ಜು.12ರಂದು ಇಲ್ಲಿನ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಜಾನಪದ ಕಲಾಮೇಳ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂತರಾಷ್ಟ್ರೀಯ ಮಟ್ಟದ ಜಾನಪದ ಗಾಯಕ ಕೋಲಾರ ರಾಜಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಾನಪದ ಕಲಾವಿದ ಸಬ್ಬನಹಳ್ಳಿ ರಾಜು ಅಧ್ಯಕ್ಷತೆ ವಹಿಸುವರು. ಜಾನಪದ ಕಲೆ ಮತ್ತು ತಳಸಮುದಾಯಗಳ ಸಂಸ್ಕೃತಿ ವಿಚಾರವಾಗಿ ಬಿ.ಆರ್. ಶಿವಕುಮಾರ್ ವಿಚಾರ ಮಂಡನೆ ಮಾಡುವರು. ಗೌರವ ಆಹ್ವಾನಿತರಾಗಿ ಪತ್ರಾಂಕಿತ ವ್ಯವಸ್ಥಾಪಕ ಮಹದೇವಪ್ಪ, ಜಾನಪದ ಗಾಯಕ ಗೋ.ನಾ.ಸ್ವಾಮಿ, ಕ್ರೀಡಾಪಟು ಪಿ.ಜೆ.ಗೋವಿಂದರಾಜು ಮುಂತಾದವರು ಭಾಗವಹಿಸುವರು.


ಪುಟ್ಟಣಗೆ ಅಭಿನಂದನೆ ಇಂದು
ಚನ್ನಪಟ್ಟಣ: ಶಿಕ್ಷಣ ಇಲಾಖೆ ಸಂಘಟನೆಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಪುಟ್ಟಣ್ಣ ಅವರಿಗೆ ಜು.12ರಂದು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಬಿ.ಎಂ.ರಸ್ತೆಯ ರತ್ನಮಹಲ್ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಉದ್ಘಾಟಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com