ಬೆಂಗಳೂರು: ಶ್ರೀಜಗದ್ಗುರು ರೇಣುಕಾದಿ ಪಂಚಾಚಾರ್ಯ ಫ್ರೀ ಬೋರ್ಡಿಂಗ್ ವತಿಯಿಂದ ವೇದ, ಆಗಮ, ಸಂಸ್ಕೃತ, ಜ್ಯೋತಿಷ್ಯ, ಕಲಿಯಬಯಸುವ ವೀರಶೈವ ಬಡ ಜಂಗಮ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೇರಬಯಸುವ ಅಭ್ಯರ್ಥಿಗಳು ಏ.20ರೊಳಗಾಗಿ ಅರ್ಜಿ ಪಡೆದು, ಏ.30ರೊಳಗಾಗಿ ಭರ್ತಿ ಮಾಡಿ ಸಲ್ಲಿಸಲು ಕೋರಲಾಗಿದೆ. ಮೇ 19ಕ್ಕೆ ಮುಕ್ತ ಸಂದರ್ಶನಕ್ಕೆ ಪೋಷಕರೊಂದಿಗೆ ಹಾಜರಾಗಲು ಕೋರಿದೆ. 10ನೇ ತರಗತಿಯವರೆಗೆ ಹಾಗೂ ಅದರ ಮೇಲ್ಪಟ್ಟು ಉತ್ತೀರ್ಣ/ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವಕಾಶವಿದ್ದು, ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯವಿರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗೆ- 080- 22872326, 22281043, 9980971394 ಸಂಪರ್ಕಿಸಬಹುದು