ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಯನ್ವಯ ಜ.9ರಲ್ಲಿ ಅಧಿಸೂಚಿಸಿದ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಗ್ರೂಪ್-ಎ, ಬಿ ಮತ್ತು ಸಿ ತಾಂತ್ರಿಕ ಹುದ್ದೆಗಳ ನೇಮಕಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಎಸ್ಸೆಸ್ಸೆಲ್ಸಿ ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದು, ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡದೇ ಇರುವ ಅಭ್ಯರ್ಥಿಗಳಿಗೆ ಏ.7ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತಿದೆ.
ಪರೀಕ್ಷೆಗೆ ಹಾಜರಾಗಬೇಕಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಈಗಾಗಲೇ ರವಾನಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ಆಯೋಗದ ವೆಬ್ಸೈಟ್- ಡಿಡಿಠ://್ಞಠಡ್ಛ.್ಞಛ್ಠ.ಟ್ಝ್ಛಿ.್ಝಟಿ/ಏ್ಟಟಜ ಕಿಛ್ಜಜ ರಲ್ಲಿ ನೋಡಬಹುದು. ಪ್ರವೇಶ ಪತ್ರ ಬಾರದಿರುವ ಅಭ್ಯರ್ಥಿಗಳು ಆಯೋಗದ ವೆಬ್ಸೈಟ್ನಲ್ಲಿ ಪ್ರವೇಶ ಪತ್ರದ ನಮೂನೆ ಪಡೆದು ಎರಡು ಭಾವಚಿತ್ರಗಳೊಡನೆ ಸಂಬಂಧಪಟ್ಟ ಪರೀಕ್ಷಾ ಕೇಂದ್ರಕ್ಕೆ ತೆರಳಿ ಬರೆಯಬಹುದು ಎಂದು ಆಯೋಗ ಸೂಚಿಸಿದೆ.