ಗಮನ ಸೆಳೆದ ಮತದಾನ ಜಾಗೃತಿ ಜಾಥಾ

Updated on: 


ಕ.ಪ್ರ.ವಾರ್ತೆ   ಮೈಸೂರು   ಏ.3
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣಿ ಮತ್ತು ಮತದಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾ ಮಂಗಳವಾರ ನಗರದಲ್ಲಿ ನಡೆಯಿತು. ಜಿಲ್ಲಾಡಳಿತವು ಏರ್ಪಡಿಸಿದ್ದ ಈ ಜಾಥಾ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾಗಿ ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ, ಮೆಟ್ರೋಪೊಲ್ ವೃತ್ತ, ಎನ್‌ಸಿಸಿ ಕಚೇರಿ ಮುಂದೆ ಸಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಅಂತ್ಯಗೊಂಡಿತು. ಡೊಳ್ಳು ಕುಣಿತ, ಗಾರುಡಿ ಗೊಂಬೆ ಕುಣಿತ, ನಗಾರಿ ಮುಂತಾದ ಜಾನಪದ ಕಲಾತಂಡಗಳೊಡನೆ ನಡೆದ ಈ ಜಾಗೃತಿ ಜಾಥಾದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ವಿದ್ಯಾರ್ಥಿನಿಯರು, ನರ್ಸಿಂಗ್ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಎಂ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು, ಡಯಟ್ ವಿದ್ಯಾರ್ಥಿಗಳು ಮತ್ತು ವಿವಿಧ ಇಲಾಖೆಯ ಸರ್ಕಾರಿ ನೌಕರರು ಭಾಗವಹಿಸಿದ್ದರು. ತಿಲಕ್ ನಗರದ ಅಂಧರ ಶಾಲೆ ವಿದ್ಯಾರ್ಥಿಗಳು ಜಾಥಾಕ್ಕೆ ಚಾಲನೆ ನೀಡಿದರು. ವಾರ್ತಾ ಇಲಾಖೆ ಉಪ ನಿರ್ದೇಶಕ ಎ.ಆರ್. ಪ್ರಕಾಶ್ ಮಾತನಾಡಿ, ನಗರ ಮಟ್ಟದಲ್ಲಿ ಜಾಥಾ ನಡೆಸಲಾಗುತ್ತಿದ್ದು, ಮುಂದೆ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿಯೂ ಈ ಜಾಗೃತಿ ಜಾಥಾ ನಡೆಸುವುದಾಗಿ ಅವರು ಹೇಳಿದರು. ಜಿಪಂ ಪ್ರಭಾರ ಸಿಇಒ ಪ್ರಕಾಶ್, ಮುಖ್ಯ ಯೋಜನಾಧಿಕಾರಿ ವಸುಂದರಾದೇವಿ ಇದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com