ಕ.ಪ್ರ. ವಾರ್ತೆ ಬೆಂಗಳೂರು ಏ.13
ಮನೆಯಲ್ಲಿ ಮಲಗಿದ್ದ 4 ವರ್ಷದ ಬಾಲಕಿಯನ್ನು ಹೊತ್ತೊಯ್ದು ಅತ್ಯಾ ಚಾರ ಎಸಗಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹೊಡೆದು ಕೊಲೆಗೈದಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಳಕಮಲೆ ಗ್ರಾಮದಲ್ಲಿ ನಡೆದಿದೆ.
ಗುಳಕಮಲೆ ನಿ ವಾಸಿ ನಾರಾಯಣಪ್ಪ (50) ಮೃತ ವ್ಯಕ್ತಿ. ಆಂದ್ರಪ್ರದೇಶ ಮೂಲದ ಯುವರಾಜ ಹಾಗೂ ಮಾಧವಿ ದಂಪತಿ ತಮ್ಮ ಮೂರು ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಗುಳಕಮಲೆ ಗ್ರಾಮದಲ್ಲಿ ವಾಸವಿದ್ದಾರೆ. ಶುಕ್ರವಾರ ರಾತ್ರಿ 9.30ರ ಸುಮಾರಿಗೆ ತಮ್ಮ ಮೂರು ಮಕ್ಕಳೊಂದಿಗೆ ಮಾಧವಿ ಮನೆಯಲ್ಲಿ ಮಲಗಿದ್ದರು, ಯುವರಾಜ ಹೊರಗೆ ತೆರಳಿದ್ದರು. ಮನೆಗೆ ಬಂದ ನಾರಾಯಣಪ್ಪ ಬಾಲಕಿಯನ್ನು ಹೊತ್ಯೊಯ್ದು ಅತ್ಯಾಚಾರ ಎಸಗಿದ್ದಾನೆ. ಕಿರುಚಿಕೊಂಡ ಬಾಲಕಿಯ ಧ್ವನಿ ಕೇಳಿದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬಂದಾಗ ನಾರಾಯಣಪ್ಪ ಪರಾರಿಯಾಗಿದ್ದ. ಶನಿವಾರ ಬೆಳಿಗ್ಗೆ ನಾರಾಯಣಪ್ಪ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾನೆ. ಗ್ರಾಮಸ್ಥರು ಆತನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಗಾಯಗೊಂಡಿದ್ದ ನಾರಾಯಣಪ್ಪನನ್ನು ಮೈಸೂರು ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ನಾರಾಯಣಪ್ಪ ಮೃತಪಟ್ಟಿದ್ದಾನೆ. ಬಾಲಕಿಯ ದೇಹದ ಮೇಲೆ ತರಚಿದ ಗಾಯಗಳಾಗಿದ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಅತ್ಯಾಚಾರ ಪ್ರಕರಣ ಹಾಗೂ ನಾರಾಯಣಪ್ಪನ ಕೊಲೆ ಸಂಬಂಧ ಗುಳಕಮಲೆ ಗ್ರಾಮಸ್ಥರ ವಿರುದ್ದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
Advertisement