ಬೆಂಗಳೂರು: ಭೂ ಒತ್ತುವರಿ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಜಾಮೀನು ಅರ್ಜಿ ವಿಚಾರಣೆ ಲೋಕಾಯುಕ್ತ ನ್ಯಾಯಾಲಯ ಫೆ.4ಕ್ಕೆ ಮುಂದೂಡಿದೆ. ಬಾಗಲೂರು ಬಳಿ 8.5 ಗುಂಟೆ ಗೋಮಾಳ ಜಮೀನು ಖರೀದಿಸಲು ಸದಾನಂದಗೌಡ, ಅವರ ಪತ್ನಿ ನಕಲಿ ದಾಖಲೆ ಪತ್ರ ನೀಡಿದ್ದರು ಎಂದು ನಾಗಲಕ್ಷ್ಮೀ ಬಾಯಿ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.