ನಾಳೆ ಚಾಮರಾಜನಗರ ಬಂದ್‌ಗೆ ವಾಟಾಳ್ ಕರೆ

Updated on: 

ಬೆಂಗಳೂರು:  ಚಾಮರಾಜನಗರದ ಗಡಿಭಾಗದಲ್ಲಿರುವ ತಳವಾಡಿಯಲ್ಲಿ ಪ್ರಾಥಮಿಕ ಶಾಲೆಯ ಪಠ್ಯಕ್ರಮದಲ್ಲಿ ತಮಿಳು ಭಾಷೆಯನ್ನು ಪ್ರಥಮ ಭಾಷೆಯಾಗಿ ಅಳವಡಿಸಿದ್ದನ್ನು ವಾಟಾಳ್ ಪಕ್ಷ ವಿರೋಧಿಸಿದ್ದು, ಜ.24ರಂದು ಚಾಮರಾಜನಗರ ಬಂದ್‌ಗೆ ಕರೆ ನೀಡಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್,  ಈ ಭಾಗದಲ್ಲಿ ಮೊದಲು ಕನ್ನಡ ಭಾಷೆ ಪ್ರಥಮ ಭಾಷೆ ಆಗಿತ್ತು. ಆದರೆ ಈಗ ತಮಿಳು ಭಾಷೆಯನ್ನು ಪ್ರಥಮ ಭಾಷೆಯಾಗಿ ಬದಲಾಯಿಸಲಾಗಿದೆ. ಇದು ರಾಜ್ಯದ ಭಾಗವಾಗಿದ್ದು ಇಲ್ಲಿ ಕನ್ನಡಕ್ಕೆ 100 ಅಂಕಗಳ ಬದಲು 50 ಅಂಕಗಳನ್ನು ನಿಗದಿಪಡಿಸಲಾಗಿದೆ. ಇದು ಭಾಷಾ ಅಲ್ಪಸಂಖ್ಯಾತರಿಗೆ ಮಾಡಿದ ಅವಮಾನ ಎಂದು ಅಭಿಪ್ರಾಯಪಟ್ಟರು. ಈ ಕುರಿತು ಹೋರಾಟ ಮಾಡಿದ ಕನ್ನಡಿಗರನ್ನು ತಮಿಳುನಾಡು ಸರ್ಕಾರ ಬಂಧಿಸಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದು ತಿಳಿಸಿದರು. ತಮಿಳುನಾಡು ಸರ್ಕಾರ ಎಲ್ಲ ರೀತಿಯಿಂದಲೂ ರಾಜ್ಯದ ಜನತೆಗೆ ತೊಂದರೆ ನೀಡುತ್ತಿದೆ. ಇದನ್ನು ವಿರೋಧಿಸಿ ಜ.24 ರಂದು ಚಾಮರಾಜನಗರ ಬಂದ್ ಆಚರಿಸಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com