ಸರ್ಕಾರ ಬೀಳಲ್ಲ

Updated on: 

ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಬೆಂಬಲಿತ 13 ಶಾಸಕರ ರಾಜಿನಾಮೆ ಅಂಗೀಕಾರವಾದರೂ ಸರ್ಕಾರ ಉರುಳುವ ಸಾಧ್ಯತೆ ಇಲ್ಲ. ಹೌದು, ನಾಮನಿರ್ದೇಶನ ಸದಸ್ಯ ಸೇರಿದಂತೆ 223 ಸದಸ್ಯರಿರುವ ವಿಧಾನಸಭೆಯಲ್ಲಿ 13 ಶಾಸಕರು ರಾಜಿನಾಮೆ ನೀಡಿದರೆ ಒಟ್ಟು ಸಂಖ್ಯಾಬಲ 210ಕ್ಕೆ ಕುಸಿಯುತ್ತದೆ.
ಸ್ಪೀಕರ್ ಹೊರತುಪಡಿಸಿ 117 ಸದಸ್ಯರನ್ನು ಹೊಂದಿರುವ ಬಿಜೆಪಿ ಬಲ 104ಕ್ಕೆ ಕುಸಿಯುತ್ತದೆ. ಮೇಲಾಗಿ ಸರ್ಕಾರ ವಿಶ್ವಾಸಮತ ಯಾಚಿಸುವ ಪರಿಸ್ಥಿತಿ ಬಂದರೆ ನಾಮನಿರ್ದೇಶನ ಸದಸ್ಯರಿಗೂ ಮತದಾನಕ್ಕೆ ಅವಕಾಶ ಇರುವುದರಿಂದ ಈ ಸಂಖ್ಯೆ 105 ಆಗುತ್ತದೆ.
ಜತೆಗೆ ಪರ-ವಿರುದ್ಧ ಮತ ಸಮನಾಗಿದ್ದರೆ ಸ್ಪೀಕರ್ ಮತ ಚಲಾಯಿಸಬಹುದು. ಸ್ಪೀಕರ್ ಆಡಳಿತ ಪಕ್ಷದವರೇ ಆಗಿರುವುದರಿಂದ ಆಗ ಬಿಜೆಪಿ ಸಂಖ್ಯೆ 106 ಆಗುತ್ತದೆ. ಅಲ್ಲದೆ, ಪಕ್ಷೇತರ ಸದಸ್ಯ ವರ್ತೂರು ಪ್ರಕಾಶ್ ಸಚಿವರಾಗಿರುವುದರಿಂದ ಅವರೂ ಬೆಂಬಲಿಸಬಹುದು. ಇದರಿಂದ ಸರ್ಕಾರ ಸೇಫ್.
 ಇನ್ನೊಂದೆಡೆ ಯಡಿಯೂರಪ್ಪ ಕಾರಣದಿಂದ ಸರ್ಕಾರ ಉರುಳುತ್ತದೆ ಎಂದಾದರೆ ಒಂದಿಬ್ಬರು ಪಕ್ಷೇತರ ಸದಸ್ಯರು ಮತ್ತು ಜೆಡಿಎಸ್‌ನವರೂ ಪರೋಕ್ಷವಾಗಿ ಸರ್ಕಾರವನ್ನು ಬೆಂಬಲಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com