ಬೆಂಗಳೂರು: ಆಯುರ್ವೇದ ಕುಟೀರದಲ್ಲಿ ಮಾರ್ಚ್ 15ರಂದು ನಾಡಿ ಪರೀಕ್ಷೆಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ರಿಂದ 6ರವರೆಗೆ ನಡೆಯಲಿರುವ ಶಿಬಿರದಲ್ಲಿ ನಾಡಿ ಪರೀಕ್ಷೆಯಲ್ಲಿ ದೇಹದಲ್ಲಿರುವ ಕಾಯಿಲೆಗಳನ್ನು ಪತ್ತೆ ಮಾಡುವುದಲ್ಲದೆ ಮುಂದೆ ಬರಬಹುದಾದ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ಕೂಡ ನೀಡುತ್ತಾರೆ. ಆರಂಭಿಕ ಹಂತದಲ್ಲಿಯೇ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತದೆ. ಉತ್ತಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯೊಂದಿಗೆ ಸೇವಿಸಬೇಕಾದ ಔಷಧಗಳ ಕುರಿತು ಮಾಹಿತಿ ನೀಡಲಾಗುವುದು. ಚಿಕಿತ್ಸೆಗೆ ಬರುವರು ಖಾಲಿ ಹೊಟ್ಟೆಯಲ್ಲಿ ಅಥವಾ ಆಹಾರ ಸೇವಿಸಿದ ಎರಡೂವರೆ ಗಂಟೆಯ ನಂತರ ತಪಾಸಣೆಗೊಳಪಡಬೇಕು ಎಂದು ಎಂದು ಪ್ರಕಟಣೆ ತಿಳಿಸಿದೆ. ವಿವರಗಳಿಗೆ-ಡಾ.ಸೀತಾರಾಂ ಪ್ರಸಾದ್-080-25437177.