ಕ.ಪ್ರ ವಾರ್ತೆ ಬೆಂಗಳೂರು ಮಾ.16
ಗಾಂಧಿನಗರ ನಾಗರಿಕರ ಕ್ಷೇಮಾಭಿವೃದ್ಧಿ ವೇದಿಕೆ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಸಹಯೋಗದೊಂದಿಗೆ ಮಾ.17ರಂದು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಭುವನೇಶ್ವರಿ ನಗರ ಕೆ.ಪಿ.ಅಗ್ರಹಾರದಲ್ಲಿ ನೇತ್ರ ಉಚಿತ ತಪಾಸಣೆ, ಕನ್ನಡಕ ವಿತರಣೆ ಕಾರ್ಯಕ್ರಮ ಏರ್ಪಡಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಚಾಲನೆ ನೀಡಲಿದ್ದು, ಪಾಲಿಕೆ ಸದಸ್ಯ ಟಿ.ಮಲ್ಲೇಶ್ ಭಾಗವಹಿಸಲಿದ್ದಾರೆ.