ನಿಮ್ಮ ಇಡೀ ದೇಹವನ್ನು ಒಂದು ಸುಂದರ ಆಕಾರಕ್ಕೆ ತರುವುದಿದ್ದರೆ ನೃತ್ಯ ಮಾಡುವುದು ಎಲ್ಲ ವ್ಯಾಯಾಮಗಳಿಗಿಂತಲೂ ಮೇಲು. ಹಾಗಂತ ಎಲ್ಲರೂ ಮಾಡಲಿಕ್ಕೆ ಆಗುವುದಿಲ್ಲ. ಅದಕ್ಕೆ ತರಬೇತಿ ಬೇಕು. ಏನೇ ಆಗಲಿ, ದಿನಕ್ಕೆ ಒಂದು ಗಂಟೆ ನೃತ್ಯ ಮಾಡುವುದರಿಂದ ಕನಿಷ್ಠ 600ರಿಂದ 800 ಕ್ಯಾಲೋರಿ ಕಡಿಮೆ ಮಾಡಬಹುದು. ವ್ಯಾಯಾಮ ದೃಷ್ಟಿಯನ್ನು ಬಿಟ್ಟು ನೋಡುವುದಾದರೆ ನೃತ್ಯ ನಿಮ್ಮ ಮನಸ್ಸನ್ನು ಕೂಡಾ ಉಲ್ಲಾಸಿತಗೊಳಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಇಷ್ಟೆ ಅಲ್ಲದೆ, ಒತ್ತಡ ಮುಕ್ತರಾಗಲು ನೃತ್ಯ ಅತ್ಯುತ್ತಮ ಸಾಧನ. ನೃತ್ಯ ನಿಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ.