ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ಮತ್ತು ತಾಂತ್ರಿಕ ವಿಭಾಗಕ್ಕೆ ಯುಜಿಸಿಯಿಂದ ದೊರೆತಿರುವ ಸಂಶೋಧನಾ ಕಾರ್ಯ ಪೂರ್ಣಕ್ಕೆ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎಂ.ಎಸ್ಸಿ. ರಾಸಾಯನಶಾಸ್ತ್ರ ಅಥವಾ ಜೀವ ರಾಸಾಯನ ಶಾಸ್ತ್ರ ಪದವಿ ಪಡೆದಿರುವ ಅಭ್ಯರ್ಥಿಗಳು ಮಾ.27ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 22222541.
ವೃದ್ಧಾಶ್ರಮಕ್ಕೆ ಆಹ್ವಾನ
ಶಿರಡಿ ಸೇವಾ ಟ್ರಸ್ಟ್ ವತಿಯಿಂದ ಶ್ರೀಸಾಯಿ ನೆಮ್ಮದಿಯ ಮನೆ ವೃದ್ಧಾಶ್ರಮ ನಡೆಸುತ್ತಿದ್ದು, ಅಗತ್ಯವಿರುವ ವೃದ್ಧರು ಸೇರಿಕೊಳ್ಳಬೇಕಾಗಿ ಟ್ರಸ್ಟ್ ಕೋರಿದೆ. ಮಾಹಿತಿಗೆ- 9019799555, 9343839143.
ಸಾಮೂಹಿಕ ಉಚಿತ ವಿವಾಹಕ್ಕೆ ಆಹ್ವಾನ
ಲಗ್ಗೆರೆಯ ವಿಮೋಚನಾ ಮಹಿಳಾ ಟ್ರಸ್ಟ್ ಸಾಮೂಹಿಕ ಉಚಿತ ವಿವಾಹ ನಡೆಸಲಿದ್ದು ವಿವಾಹವಾಗ ಬಯಸುವವರು ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ತಾಳಿ, ಸೀರೆ, ಪಂಚೆ ಮತ್ತು ಶರ್ಟ್ ನೀಡಲಾಗುವುದು ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 90089 99693.
ಹನುಮಂತಯ್ಯ ನೇಮಕ
ಹನುಮಂತಯ್ಯ ಮತ್ತು ಆಂಜನಪ್ಪ ಅವರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರೇತರ ಮಂಡಳಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ತರಬೇತಿ ಶಿಬಿರ
ರುಡ್ಸೆಟ್ ಸಂಸ್ಥೆ ನಿರುದ್ಯೋಗಿಗಳಿಗಾಗಿ 45 ದಿನಗಳ ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್, 30 ದಿನಗಳ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್ಸೆಟ್ ರಿಪೇರಿ ಹಾಗೂ 30 ದಿನಗಳ ಮೊಬೈಲ್ ಸರ್ವಿಸ್ ತರಬೇತಿ ಆಯೋಜಿಸಿದ್ದು, ಈ ತರಬೇತಿ ಶಿಬಿರಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾ.25 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ದೂರವಾಣಿ 27728166.
ಉಚಿತ ಮಾರ್ಗದರ್ಶನ
ಭಾರತೀಯ ಲೋಕಸೇವಾ ಆಯೋಗದ ಸಾಮಾನ್ಯ ಅಧ್ಯಯನದ ಬಗ್ಗೆ ಅಭ್ಯರ್ಥಿಗಳಿಗೆ ಉಚಿತ ಮಾರ್ಗದರ್ಶನ ನೀಡಲು ಅನರ್ಘ್ಯ ಐಎಎಸ್ ಅಕಾಡೆಮಿ ಮುಂದಾಗಿದೆ. ಮಾ.20ರಂದು ಸಂಜೆ 5.30ಕ್ಕೆ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ ಹತ್ತಿರ ಇರುವ ಸಂಸ್ಥೆಯ ಕಚೇರಿಯಲ್ಲೇ ಕಾರ್ಯಾಗಾರ ನಡೆಯಲಿದೆ. ಮೊ.ಸಂ 9916608300ನ್ನು ಸಂಪರ್ಕಿಸಬಹುದು.