ಕುದುರೆ ಸವಾರಿ ಎಲ್ಲರಿಗೂ ಸಾಧ್ಯವಿಲ್ಲವಾದರೂ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ತುಂಬಾ ಉಪಯುಕ್ತ ಎಂಬುದು ಗಮಾನರ್ಹ. ವಾರಕ್ಕೆ ಒಂದು ಸಾರಿಯಾದರೂ ಕುದುರೆ ಸವಾರಿ ಮಾಡಿದರೆ ಆರೋಗ್ಯ ದೃಷ್ಟಿಯಿಂದ ಮಾತ್ರವಲ್ಲದೆ ನಿಮ್ಮ ಫಿಟ್ನೆಸ್ ಕೂಡಾ ಸುಧಾರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕುದುರೆ ಸವಾರಿಯಿಂದ ನೈಸರ್ಗಿಕ ಆನಂದ ಪಡೆಯಬಹುದು. ದಿನಕ್ಕೆ ಒಂದು ಗಂಟೆ ಕುದುರೆ ಸವಾರಿ ಮಾಡುವುದರಿಂದ 200ರಿಂದ 600 ಕ್ಯಾಲೋರಿ ಕಡಿಮೆ ಮಾಡಿಕೊಳ್ಳಬಹುದು. ಕುದುರೆ ಸವಾರಿಯಿಂದ ನಿಮ್ಮ ಪೃಷ್ಠಗಳು, ಆ್ಯಬ್ಸ್, ತೊಡೆಗಳ ಸ್ನಾಯುಗಳಿಗೆ ಬಲದೊರೆಯತ್ತದೆ. ಅಷ್ಟೇ ಅಲ್ಲದೆ, ಅವುಗಳಿಗೊಂದು ಆಕಾರ ಕೂಡಾ ಲಭ್ಯವಾಗುತ್ತದೆ.