ಬೆಂಗಳೂರು: ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಇನ್ಸ್ಟಿಟ್ಯೂಟ್ ಆಯೋಜಿಸಿದ್ದ ಸಾಂಸ್ಕೃತಿಕ ಉಡುಗೆ- ತೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ವಿವಿಧ ವಿನ್ಯಾಸದ ಉಡುಗೆಯಲ್ಲಿ ಸಂಭ್ರಮಿಸಿದರು. ಆಚಾರ್ಯ ಇನ್ಸ್ಟಿಟ್ಯೂಟ್ ಪ್ರತಿ ವರ್ಷ ನಡೆಸುವ ಆಚಾರ್ಯ ಹಬ್ಬ ಈ ಬಾರಿ ಮಾ.22 ಮತ್ತು 23ರಂದು ನಡೆಯಲಿದೆ. ಇದೊಂದು ಅಂತರ್ ಕಾಲೇಜು ವಿದ್ಯಾರ್ಥಿಗಳ ಹಬ್ಬವಾಗಿದ್ದು, ರಾಕ್ ಶೋ, ಸಮೂಹ ನೃತ್ಯ, ಫ್ಯಾಷನ್ ಶೋ, ಫೇಸ್ ಪೈಂಟಿಂಗ್, ಕಂಪ್ಯೂಟರ್ ಗೇಮ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ www.acharya.ac.in/habba ನೋಡಬಹುದು. 'ಕನ್ನಡಪ್ರಭ' ದಿನಪತ್ರಿಕೆ ಈ ಕಾರ್ಯಕ್ರಮದ ಮಾಧ್ಯಮ ಪ್ರಾಯೋಜಕತ್ವ ವಹಿಸಿದೆ.