ಬೆಂಗಳೂರು: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ನಿವೃತ್ತ ಶಿಕ್ಷಕ ರಾಘವೇಂದ್ರ ಸ್ವಾಮಿ ಕೆ.ವಿ. ಅವರು ಮಂಡಿಸಿದ ಇಂಗ್ಲಿಷ್ನ ಪ್ರಬಂಧಕ್ಕೆ ಕುವೆಂಪು ವಿವಿಯಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಾಘವೇಂದ್ರ ಸ್ವಾಮಿ 'ಟಿ.ಎಸ್. ಇಲಿಯಟ್ಸ್ ಪ್ಲೇಸ್ ಎಂಡ್ ಮಿಥ್ಸ್: ರಿ ಎನ್ ಪ್ಲೋರಿಂಗ್ ಮೈನ್ ಟು ಮಾಡಾರ್ನಿಟಿ' ಎಂಬ ವಿಷಯವನ್ನು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಡೀನ್ ಅಂಡ್ ಡೈರೆಕ್ಟರ್ ಡಾ. ಪ್ರೊ. ಬಿ.ವೈ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು.