ಬೆಂಗಳೂರು: ಬೆಂಗಳೂರು ಸೈನ್ಸ್ ಫೋರಂ ಆಶ್ರಯದಲ್ಲಿ 7ನೇ ತರಗತಿ ವಿದ್ಯಾರ್ಥಿಗಳಿಗೆ ಏ.4 ರಿಂದ ಮೇ 21ರವರೆಗೆ ಬೇಸಿಗೆ ತರಬೇತಿ ಶಿಬಿರ ನಡೆಯಲಿದೆ.
ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ವಿಜ್ಞಾನ ತರಗತಿಗಳನ್ನು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ನಡೆಸಲಾಗುವುದು. ಪ್ರಯೋಗಶಾಲೆಯಲ್ಲಿ ಅಭ್ಯಾಸ, ನೆಹರೂ ತಾರಾಲಯ, ಇತರ ಮ್ಯೂಸಿಯಂಗಳಿಗೆ ಭೇಟಿ ಮತ್ತು ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಪ್ರಯೋಗಳ ಮೂಲಕ ವಿವರಿಸಲಾಗುವುದು. ಪ್ರವೇಶ ಶುಲ್ಕ 200 ಭಾಗವಹಿಸಲು- 9900320532.