ಕ.ಪ್ರ. ವಾರ್ತೆ ಬೆಂಗಳೂರು ಮಾ.28
ಲೋಕಸತ್ತಾ ಪಕ್ಷ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಗುರುವಾರ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆ ಮಾಡಿದೆ.
ಪಟ್ಟಿ ಬಿಡುಗಡೆಗೆ ಮುನ್ನ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಡಾ. ಅಶ್ವಿನ್ ಮಹೇಶ್, ಅಭಿವೃದ್ಧಿಶೀಲ ದೇಶ ಎಂದೇ ಖ್ಯಾತಿ ಪಡೆದಿರುವ ಭಾರತ, ಅಭಿವೃದ್ಧಿ ಹೊಂದಲು ಮೌಲ್ಯಾಧಾರಿಕ ರಾಜಕಾರಣದಿಂದ ಮಾತ್ರ ಸಾಧ್ಯ ಎಂದರು.
ನಂತರ ಮಾತನಾಡಿದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಎನ್.ಎಸ್. ಮುಕುಂದ್, ನಾಡಿನ ಜನತೆ ಈಗಾಗಲೇ ಆಡಳಿತ ಹಾಗೂ ವಿರೋಧ ಪಕ್ಷಗಳಿಂದ ಬೇಸತ್ತಿದ್ದಾರೆ. ಉತ್ತಮ ರಾಜಕಾರಣ ಬಯಸುತ್ತಿದ್ದಾರೆ. ಅದನ್ನು ನೀಡಲು ತಮ್ಮ ಪಕ್ಷ ಮುಂದಾಗಿದ್ದು, ಅದಕ್ಕೆ ಜನರು ಬೆಂಬಲಿಸುತ್ತಾರೆ ಎಂಬ ಭರವಸೆ ತಮಗಿದೆ ಎಂದರರು. ಪಕ್ಷದ ಧ್ಯೇಯ, ಉದ್ದೇಶಕ್ಕೆ ಮನ್ನಣೆ ನೀಡುವವರು, 7676557788 ಇಲ್ಲವೇ 9343398199ಕ್ಕೆ ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತೆಯರು ವಿಷಲ್ ಹೊಡೆಯುವ ಮೂಲಕ ಪಕ್ಷದ ಚಿಹ್ನೆಯನ್ನು ಪ್ರದರ್ಶಿಶಿಸಿದರು.