ಚನ್ನಪಟ್ಟಣ: ತಂದೆ-ತಾಯಿಗಳೇ ನಿಜವಾದ ದೇವರುಗಳು, ಅವರನ್ನು ಗೌರವಿಸಿದರೆ ಎಲ್ಲರನ್ನೂ ಗೌರವಿಸಿದಂತೆ ಎಂದು ಭಾರತ ವಿಕಾಸ್ ಪರಿಷತ್ ಸ್ಥಾಪಕ ಅಧ್ಯಕ್ಷ ಸಿ.ವಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾ.ಸೇ.ಯೋ. ಘಟಕ-2 ವಿಶೇಷ ವಾರ್ಷಿಕ ಶಿಬಿರದ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿ ಅವರು ಮಾತನಾಡಿದರು.
ಮನೆಯಲ್ಲಿರುವ ತಂದೆ-ತಾಯಿಗಳನ್ನು ಆಶ್ರಮಕ್ಕೆ ನೂಕಿ ದೂರ ತೀರದ ದೇವಾಲಯಗಳಿಗೆ ಭೇಟಿ ಮಾಡಿ ಪುನೀತರಾದೆವು ಎಂದು ಇಲ್ಲದ ಭ್ರಮಾ ಲೋಕದಲ್ಲಿ ಬದುಕುವ ನಾವು ನಮ್ಮ ಹೆತ್ತವರನ್ನು ಕಡೆಗಾಣಿಸುವುದು ಯಾವ ನ್ಯಾಯ, ಧರ್ಮ, ಯಾವ ಮಾನವೀಯತೆ ಎಂದು ವಿಷಾಧಿಸಿದರಲ್ಲದೆ, ಶಿಬಿರಾರ್ಥಿಗಳು ಈ ಬಗ್ಗೆ ಅರ್ಥಮಾಡಿಕೊಂಡು ಅರಿವು ಮೂಡಿಸಬೇಕೆಂದು ಕರೆ ನೀಡಿದರು.
ಜಿಪಂ ಸದಸ್ಯ ರಘುಕುಮಾರ್ ಮಾತನಾಡಿದರು. ಪ್ರಾಂಶುಪಾಲ ಟಿ.ಎಂ.ರಾಜು ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಶಿಬಿರಾಧಿಕಾರಿ ಡಾ.ಅಣ್ಣಯ್ಯತೈಲೂರು, ಸಿ.ಆರ್.ಗೋಪಾಲಕೃಷ್ಣ, ಸಿದ್ದೇಗೌಡ, ರಮೇಶ್, ದಯಾನಂದ ಸಾಗರ್, ಬಸವರಾಜು, ಗಂಗಾಧರ್, ಶಿಕ್ಷಕ ಅಪ್ಪಾಜಯ್ಯ ಹಾಜರಿದ್ದರು, ದಿಲೀಪ್ ನಿರೂಪಿಸಿದರು. ಅನ್ನಪೂರ್ಣಿಮಾ ಹೆಚ್.ಎಸ್. ಉತ್ತಮ ಶಿಬಿರಾರ್ಥಿನಿ ಪ್ರಶಸ್ತಿ ಪಡೆದರು.