ಸೌಲಭ್ಯಗಳಿಂದ ಇನ್ನೂ ದೂರ ಸರ್

Updated on: 

-ವಿಶೇಷವರದಿ

ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಸರ್ಎಂವಿ 5ನೇ ಬಡಾವಣೆಯ ವ್ಯಥೆ
ಬೆಂಗಳೂರು: ಬಿಡಿಎ ಸೈಟು ಎಂದರೆ ಅಲ್ಲಿ ಸಕಲ ಸೌಲಭ್ಯವೂ ಲಭ್ಯವಿರುತ್ತದೆ ಎಂಬುವುದು ಬಹುತೇಕ ಜನರ ಊಹೆ.
ಆದರೆ, ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆಯಲ್ಲಿ ವಾಸಿಸುತ್ತಿರುವವರು ಇಂದಿಗೂ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಒಳಚರಂಡಿ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿಲ್ಲ, ಕಾವೇರಿ ನೀರಿಲ್ಲ, ಕಸ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ  ಇಲ್ಲ. ಇದೇ ರೀತಿ ಸಾಕಷ್ಟು ಸಮಸ್ಯೆಗಳಿಂದ ದಿನ ದೂಡುತ್ತಿದ್ದಾರೆ.
ಸಮಸ್ಯೆಗಳ ಬಗ್ಗೆ ಬಡಾವಣೆಯ  ನಿವಾಸಿಗಳು ಹಲವಾರು ಬಾರಿ ಬಿಡಿಎ ಅಧಿಕಾರಿಗಳಿಗೆ, ಶಾಸಕ, ಪಾಲಿಕೆ ಸದಸ್ಯರಿಗೂ ಪತ್ರ ಬರೆದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ನೀರಿಗಾಗಿ ಹಾಹಾಕಾರ: ಬಿಡಿಎ ಬಡಾವಣೆಯಲ್ಲಿ ವಾಸಿಸುತ್ತಿರುವವರು ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ನೀರಿನ ಸಮಸ್ಯೆಗೆ ಪರಿಹಾರ ನೀಡಲು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಲ್ಲಾಳ ಕೆರೆಯಿಂದ ನೀರನ್ನು ಬಡಾವಣೆಗೆ ಹರಿಸಲು ಯೋಜನೆ ರೂಪಿಸುವುದಾಗಿ ಶಾಸಕಿ ಶೋಭಾಕರಂದ್ಲಾಜೆ ಭರವಸೆ ನೀಡಿದ್ದರು. ಇದು ಕೇವಲ ಭರವಸೆಯಾಗಿಯೇ ಉಳಿಯಿತು.
ಖಾಲಿ ಸೈಟಿಗೆ ಕಸ: ಪ್ರತಿದಿನ ಮನೆಗಳಿಂದ ಉತ್ಪಾದನೆಯಾಗುವ ಕಸವನ್ನು ವಿಲೇವಾರಿ ಮಾಡಲು ಕಸದ ತೊಟ್ಟಿಗಳು ಇಲ್ಲ. ಹೀಗಾಗಿ ನಿವಾಸಿಗಳು ಖಾಲಿ ಇರುವ ಸೈಟುಗಳಿಗೆ ಕಸ ಹಾಕುವುದು ಅನಿವಾರ್ಯ. ಇದರಿಂದ ಅಕ್ಕ-ಪಕ್ಕದಲ್ಲಿರುವ ನಿವಾಸಿಗಳಿಗೆ ಸೊಳ್ಳೆಯ ಕಾಟ ಹೆಚ್ಚಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಎಂ.ಆರ್.ಕೆ. ಮೂರ್ತಿ.
ಭರತ್ಲಾಲ್ ಮೀನಾ ಹೇಳಿದ್ದೇನು?: ಎರಡು ವರ್ಷ ಬಿಡಿಎ ಆಯುಕ್ತರಾಗಿದ್ದ ಭರತ್ಲಾಲ್ ಮೀನಾ, 'ನಿವೇಶನ ಹಂಚಿಕೆಯಾಗಿ ಐದಾರು ವರ್ಷವಾದರೂ ಜನರು ಮನೆ ಕಟ್ಟಿಲ್ಲ. ನಕ್ಷೆ ತಯಾರಿಸಿ ಮಂಜೂರು ಮಾಡಿಸಿ ಮನೆ ನಿರ್ಮಾಣ ಪ್ರಾರಂಭ ಮಾಡಲಿ. ಎಲ್ಲಾ ಸೌಕರ್ಯ ನೀಡುತ್ತೇವೆ' ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.
ಆದರೆ ಇಂದು ಈ ಬಡಾವಣೆಯಲ್ಲಿ 500 ಮನೆ. ಆದರೂ ಇದುವರೆಗೆ ಹೆಚ್ಚಿನ ಬದಲಾವಣೆ ಏನು ಆಗಿಲ್ಲ ಎನ್ನುತ್ತಾರೆ ನಿವಾಸಿಗಳು.
ಹೈಕೋರ್ಟ್ನಲ್ಲಿ ಪಿಎಎಲ್: ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿಕೊಡುವಂತೆ ಅಲ್ಲಿನ ನಿವಾಸಿಗಳು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಹಾಕಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಶೀಘ್ರವೇ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕು ಎಂದು ಬಿಡಿಎಗೆ ಸೂಚನೆ ನೀಡಿತ್ತು.  ಆದರೂ ಸೌಲಭ್ಯ ಮಾತ್ರ ದೊರೆಯಲಿಲ್ಲ.


ರಾಜರಾಜೇಶ್ವರಿ ನಗರದ ವ್ಯಾಪ್ತಿಗೆ ಬರುವ ಜ್ಞಾನಜ್ಯೋತಿ ನಗರ, ಜ್ಞಾನಜ್ಯೋತಿ ಬಡಾವಣೆಯಲ್ಲಿರುವ ನಿವಾಸಿಗಳಿಗೆ ಎಲ್ಲಾ ಸೌಲಭ್ಯ ನೀಡಲಾಗಿದೆ. ನಮ್ಮ ಬಡಾವಣೆಗೆ ಏಕೆ ಸೌಲಭ್ಯ ನೀಡುವ ಬಗ್ಗೆ ಬಿಡಿಎ ನಿರ್ಲಕ್ಷ್ಯ ತೋರಿಸುತ್ತಿದೆ ಗೊತ್ತಿಲ್ಲ.
ಟಿ ಮೂರ್ತಿ,
ಬಡಾವಣೆಯ ನಿವಾಸಿ


ಬಿಡ್ಲ್ಯೂಎಸ್ಎಸ್ಬಿಗೆ ಟೆಂಡರ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಒಳಚರಂಡಿ ಸಂಪರ್ಕ ಕಲ್ಪಿಸಲಾಗುವುದು.
ಟಿ ರವೀಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಬಿಡಿಎ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com