ಕಾರ್ಮಿಕನ ಬಲಿ ಪಡೆದ ಲಿಫ್ಟ್

Updated on: 

ಯಲಹಂಕ: ಕಟ್ಟಡ ನಿರ್ಮಾಣದ ವೇಳೆ ಲಿಫ್ಟ್ ಕುಸಿದ ಹಿನ್ನೆಲೆಯಲ್ಲಿ, ನಾಗರಾಜ (26) ಎಂಬ ಕಾರ್ಮಿಕ ಮೃತಪಟ್ಟಿದ್ದಾನೆ. ಯಲಹಂಕ ಉಪನಗರ 4ನೇ ಹಂತದಲ್ಲಿರುವ ಬಿಎಂಸ್ ಕಾಲೇಜಿನ ಮಹಿಳಾ ಹಾಸ್ಟೆಲ್‌ನಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತನಾಗಿದ್ದ ವೇಳೆ ಈ ಘಟನೆ ನಡೆದಿದೆ. ಈತ ಮೂಲತಃ ಗುಲ್ಬರ್ಗ ಜಿಲ್ಲೆ, ಚಿತ್ತಾಪುರ ತಾಲೂಕು ಕೊಂಚೂರಿನವ. ಕಳೆದ ಹಲವು ವರ್ಷಗಳಿಂದ ಯಲಹಂಕದಲ್ಲಿ ವಾಸವಾಗಿದ್ದ ಈತ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ.
ಕುಸಿದ ಲಿಫ್ಟ್: ಯಲಹಂಕ ಉಪನಗರ 4ನೇ ಹಂತದಲ್ಲಿರುವ ಬಿಎಂಎಸ್ ಕಾಲೇಜಿನ ಮಹಿಳಾ ಹಾಸ್ಟೆಲ್ ಕಟ್ಟಡದ 5ನೇ ಅಂತಸ್ತಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯತ್ತಿತ್ತು. ನಾಗರಾಜ ಸರಕು ಸಾಮಗ್ರಿಗಳನ್ನು ಮೇಲೆತ್ತಿ ತರುವ ಲಿಫ್ಟ್‌ನಲ್ಲಿದ್ದ. ನಿರ್ಮಾಣ ಸಾಮಗ್ರಿ ಎತ್ತಿಕೊಳ್ಳಲು ಹೋದ ಸಂದರ್ಭದಲ್ಲಿ ಭಾರವನ್ನು ತಾಳದೆ ಲಿಫ್ಟ್ ಕುಸಿದು ಬಿತ್ತು. ಲಿಫ್ಟ್‌ನೊಳಗಿದ್ದ ನಾಗರಾಜ 5ನೇ ಅಂತಸ್ತಿನಿಂದ ಕೆಳಗುರುಳಿ ಬಿದ್ದಿದ್ದಾನೆ.  ತಕ್ಷಣವೇ ಆತನನ್ನು ಸಮೀಪದ ನೇಹ ಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಯಿತು.  ಅಷ್ಟರೊಳಗೆ ಆತ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದ.
ಪ್ರತಿಭಟನೆ: ಘಟನೆ ತಿಳಿಯುತ್ತಿದ್ದಂತೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ರಾಜ್ಯ ಸಂಚಾಲಕ ಬಡವರಾಜ್ ಪಡುಕೋಟೆ, ಯಲಹಂಕ ವಿಧಾನಸಭಾ ಕ್ಷೇತ್ರಾಧ್ಯಕ್ಷ ಅರವಿಂದ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಮನು, ಯಲಹಂಕ ಹೋಬಳಿ ಅಧ್ಯಕ್ಷ ಭರತ್, ವಾರ್ಡ್ 3ರ ಅಧ್ಯಕ್ಷ ವೆಂಕಟೇಶ ಮೂರ್ತಿ, ವಾರ್ಜ್ 4ರ ಅಧ್ಯಕ್ಷ ಅಶೋಕ್, ಶಿವು ಸೇರಿದಂತೆ ನೂರಾರು ಕಾರ್ಯಕರ್ತರು ನೇಹ ಪ್ರಕಾಶ್ ಆಸ್ಪತ್ರೆಯ ಬಳಿಗೆ ಆಗಮಿಸಿ ಧರಣಿ ನಡೆಸಿದರು.  ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com