ಬೆಂಗಳೂರು: ನಿತ್ಯಾನಂದನ ವಿರುದ್ಧ ಸಿಐಡಿ ತನಿಖೆ ಹಾಗೂ ಪುರುಷತ್ವ ಪರೀಕ್ಷೆ ನಡೆಸುವಂತೆ ರಾಮನಗರದ ಸಿಜೆಎಂ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಒಂದು ದಿನ ತಡೆಯಾಜ್ಞೆ ನೀಡಿದೆ. ನಿತ್ಯಾನಂದನ ವಿರುದ್ಧ ಸಿಐಡಿ ತನಿಖೆ ಹಾಗೂ ಪುರುಷತ್ವ ಪರೀಕ್ಷೆ ನಡೆಸುವಂತೆ ರಾಮನಗರದ ಸಿಜೆಎಂ ಕೋರ್ಟ್ ನೀಡಿದ್ದ ಆದೇಶವನ್ನು ರದ್ದುಪಡಿಸುವಂತೆ ನಿತ್ಯಾನಂದ ಮತ್ತು ಇತರೆ ನಾಲ್ಕು ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ.ಎ.ಎಸ್.ಪಚ್ಚಾಪುರೆ ಅವರ ಏಕಸದಸ್ಯ ಪೀಠ, ರಾಮನಗರದ ಸಿಜೆಎಂ ಕೋರ್ಟ್ ನೀಡಿದ್ದ ಎಲ್ಲಾ ಆದೇಶಕ್ಕೆ ಒಂದು ದಿನ ಮಧ್ಯಂತರ ತಡೆಯಾಜ್ಞೆ ನೀಡಿದೆ.