ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ವಿತರಿಸುವ ಸೈಕಲ್ನ ಟೆಂಡರ್ ಪ್ರಕ್ರಿಯೆ ಪ್ರಶ್ನಿಸಿ ಹಿರೋ ಇಕೋ ಟೆಕ್ ಲಿ. ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸೈಕಲ್ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರ ಕೇವಲ ಹಿರೋ, ಏವನ್ ಮತ್ತು ಟೈ ಸೈಕಲ್ ಆಫ್ ಇಂಡಿಯಾ ಕಂಪನಿಗೆ ಮಾತ್ರ ಟೆಂಡರ್ ನೀಡುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿತರಿಸುತ್ತಿರುವ ಸೈಕಲ್ ಶೇ.300 ರಷ್ಟು ಗುಣಮಟ್ಟ ಹೊಂದಿರಬೇಕು. ಟೆಂಡರ್ನಲ್ಲಿ ಭಾಗವಹಿಸುವವರು 3 ವರ್ಷದಲ್ಲಿ 100 ಕೋಟಿಗೂ ಹೆಚ್ಚು ವಹಿವಾಟು ನಡೆಸಿರಬೇಕು ಎಂದು ಟೆಂಡರ್ನಲ್ಲಿ ಸೂಚಿಸಿದೆ. ಆದರೆ ಈ ಕಂಪನಿಗಳು ಕಡಿಮೆ ಗುಣಮಟ್ಟದ ಸೈಕಲ್ ನೀಡುತ್ತಿದ್ದು ಪ್ರತಿ ಸೈಕಲ್ಗೆ 800 ಹೆಚ್ಚು ದರ ವಿಧಿಸಲಾಗಿದೆ ಎಂದು ಆರೋಪಿಸಿದರು. ವಿಚಾರಣೆ ನಡೆಸಿದ ನ್ಯಾ. ಅಶೋಕ್ ಬಿ ಹಿಂಚಿಗೇರಿ ಪೀಠ, ಪ್ರಕರಣ ಕುರಿತು ಮೇಲ್ಮನವಿ ಪ್ರಾಧಿಕಾರದಲ್ಲಿ ವಿಚಾರಣೆ ಬಾಕಿ ಇದ್ದು ಅಲ್ಲಿಯೇ ಬಗೆಹರಿಸಿಕೊಳ್ಳುವಂತೆ ಸೂಚಿಸಿ ಅರ್ಜಿ ವಜಾಗೊಳಿಸಿದೆ.