
ಬೆಂಗಳೂರು: ರಾಸಲೀಲೆಗೆ ಪೀಡಿಸಿದ 31 ವರ್ಷದ ಗೃಹಿಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 28 ವರ್ಷದ ಎಂಸಿಎ ವಿದ್ಯಾರ್ಥಿಗೆ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಶ್ವನಾಥ್ ವಿ ಅಂಗಡಿ ಅವರು ಅಪರಾಧಿ ಬಿಹಾರ ಮೂಲದ ಲಲನ್ ಅಲಿಯಾಸ್ ಲಲನ್ ಕುಮಾರ್ ಚೌಡಸ್ಯಗೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದ್ದಾರೆ.
ಭುವನೇಶ್ವರಿ ಕಾಲೇಜಿನಲ್ಲಿ ಎಂಸಿಎ ವಿದ್ಯಾರ್ಥಿಯಾಗಿದ್ದ ಬಿಹಾರ ಮೂಲದ ಲಲನ್ ತನ್ನ ಅಕ್ಕ ಮಮತಾ ಮತ್ತು ಭಾವನ ಜತೆಗೆ ಭುವನೇಶ್ವರಿ ನಗರದಲ್ಲಿ ವಾಸವಾಗಿದ್ದ. ಈ ವೇಳೆ ತಮ್ಮ ಎದುರು ಮನೆಯಲ್ಲಿ ವಾಸವಿದ್ದ ತನ್ನ ಅಕ್ಕನ ಸ್ನೇಹಿತೆಯಾಗಿದ್ದ ಲತಾ ಎಂಬುವರೊಂದಿಗೆ ಸ್ನೇಹ ಬೆಳೆದಿದೆ. ನಂತರ ಸ್ನೇಹ ಅನೈತಿಕ ಸಂಬಂಧಕ್ಕೆ ಎಡೆ ಮಾಡಿಕೊಟ್ಟಿದೆ.
ಅತಿಯಾದ ಲೈಂಗಿಕ ಆಸಕ್ತಿ ಹೊಂದಿದ್ದ ಲತಾ ಲಲನನ್ನು ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದಳು. ಎಂಸಿಎ ವ್ಯಾಸಂಗ ಮಾಡುತ್ತಿದ್ದ ಲಲನ್‌ಗೆ ಸೆಮಿಸ್ಟರ್ ಪರೀಕ್ಷೆಗಳು ಎದುರಾಗಿದ್ದು, ಪರೀಕ್ಷೆಯಲ್ಲಿ ಪಾಸಾಗಲೇಬೇಕು ಎನ್ನುವ ಒತ್ತಡ ಆತನ ಮೇಲಿತ್ತು. ಅದಕ್ಕಾಗಿ ನಿರಂತರವಾಗಿ ಓದಬೇಕಿತ್ತು. ಆದರೆ ಲತಾ ದಿನೇ ದಿನೆ ಲೈಂಗಿಕ ಕ್ರಿಯೆಗೆ ತೊಡಗುವಂತೆ ಪೀಡುತ್ತಿದ್ದಳು ಇದರಿಂದ ಬೇಸತ್ತ ಲಲನ್ ಆಕೆಯನ್ನು ಕೊಲೆ ಮಾಡಿದ್ದ.
2010ರ ಡಿಸೆಂಬರ್ 18 ರಂದು ಲಲನ್‌ಗೆ ಪರೀಕ್ಷೆ ಇತ್ತು. ಅದಕ್ಕಾಗಿ ಸಿದ್ಧಗೊಳ್ಳುತ್ತಿದ್ದ. ಹಿಂದಿನ ದಿನ ರಾತ್ರಿ 10.20ಕ್ಕೆ ಲತಾ ಲಲನ್ ಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾಳೆ. ಆದರೆ ತನಗೆ ಪರೀಕ್ಷೆ ಇದೆ ಓದಬೇಕು ಎಂದು ಲಲನ್ ಹೇಳಿದರೂ ಕೇಳಲಿಲ್ಲ. ಇಷ್ಟು ದಿನ ಇಲ್ಲದ ಪರೀಕ್ಷೆ ಈಗೇನು ಎಂದು ಲತಾ ತಕರಾರು ತೆಗೆದಿದ್ದಾಳೆ. ಇದರಿಂದಾಗಿ ಲಲನ್ ಲತಾ ಮನೆಗೆ ಹೋಗಿದ್ದಾನೆ. ಸ್ವಲ್ಪ ಹೊತ್ತು ಸಮಯ ಕಳೆದ ಲಲನ್ ನಂತರ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಾನೆ.
ಇದರಿಂದ ಅಸಮಧಾನಗೊಂಡ ಲತಾ ಇನ್ನಷ್ಟು ಹೊತ್ತು ಜತೆಯಲ್ಲಿರಲು ಪೀಡಿಸಿ ಮತ್ತೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾರೆ. ಲಲನ್ ಒಪ್ಪದೆ ಅಲ್ಲಿಂದ ಹೊರಟಿದ್ದಾನೆ. ಈ ವೇಳೆ ''ನೀನು ವಾಪಾಸು ಹೊದರೆ ನನ್ನನ್ನು ರೇಪ್ ಮಾಡಿದ್ದಾಗಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದೆಲ್ಲ ಬೆದರಿಸಿದ್ದಾಳೆ.
ಪೊಲೀಸ್, ರೇಪ್ ಅಂತೆಲ್ಲ ಲತಾ ಬೆದರಿಸಿದಾಗ ಹೆದರಿದ ಲಲನ್, ಹೇಳಿದಂತೆಯೇ ಕೇಳುತ್ತೇನೆ ಎಂದು ತೊಟ್ಟ ಬಟ್ಟೆಯನ್ನು ಮತ್ತೆ ಬಿಚ್ಚಿದ್ದಾನೆ. ಬೆಡ್ ಮೇಲೆ ಅಂಗಾತ ಮಲಗಿದ್ದ ಲತಾ ಬಳಿಗೆ ಹೋಗಿ, ಅಲ್ಲೇ ಇದ್ದ ಟವೆಲ್‌ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ.
Advertisement