
ಬೆಂಗಳೂರು: ಬೆಂಗಳೂರಿನ ಬೊಮ್ಮಸಂದ್ರ ಸರ್ಕಲ್ ಬಳಿ ಇರುವ ಡೆಕ್ಕನ್ ಫ್ಯಾಕ್ಟರಿಯ ಕಾಂಪೌಂಡ್ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮೃತಪಟ್ಟವರನ್ನು ಕೋಲ್ಕತಾ ಮೂಲದ ಸಮೀರ(35) ಹಾಗೂ ಪಾಂಚು(30) ಹಾಗೂ ಶಂಕರ್(30) ಎಂದು ಗುರುತಿಸಲಾಗಿದೆ.
Advertisement