ಕರ್ತವ್ಯಲೋಪ ಆರೋಪ: ಇನ್ಸ್​ಪೆಕ್ಟರ್​ ಶಂಕರಾಚಾರಿ ಅಮಾನತು

ಕರ್ತವ್ಯಲೋಪ ಆರೋಪ: ಇನ್ಸ್​ಪೆಕ್ಟರ್​ ಶಂಕರಾಚಾರಿ ಅಮಾನತು
Updated on

ಬೆಂಗಳೂರು: ರೌಡಿಶೀಟರ್​ ರವಿ ಎಂಬಾತನ ವಿರುದ್ಧ ನೀಡಲಾಗಿದ್ದ ದೂರನ್ನು ಸರಿಯಾಗಿ ದಾಖಲಿಸಿಕೊಳ್ಳದ ಆರೋಪದಲ್ಲಿ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯ​ ಇನ್ಸ್​ಪೆಕ್ಟರ್​ ಶಂಕರಾಚಾರಿ ಅವರನ್ನು ಅಮಾನತು ಮಾಡಲಾಗಿದೆ.

ರೌಡಿಶೀಟರ್​ ರವಿ ಎಂಬಾತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಬಗ್ಗೆ ದೂರು ನೀಡಲಾಗಿತ್ತು. ದೂರಿಗೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಿಸಿರಲಿಲ್ಲ, ಅಲ್ಲದೆ, ಠಾಣೆ ವ್ಯಾಪ್ತಿಯಲ್ಲಿ ಕೆಲಸ ಮಾಡದ ಆರೋಪವೂ ಇತ್ತು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ವಿಫಲಾಗಿದ್ದರು ಎನ್ನಲಾಗಿದೆ.

ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು. ಇಂದು ಬೆಂಗಳೂರು ಪೊಲೀಸ್​ ಆಯುಕ್ತ ಎಂ.ಎನ್​.ರೆಡ್ಡಿ​  ಶಂಕರಾಚಾರಿ ಅಮಾನತು ಆದೇಶ ನೀಡಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com