ಬೆಳಗಾವಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಸಾಮಾನ್ಯ ಪ್ರವೇಶ (ಸಿಇಟಿ) ಪರೀಕ್ಷೆಯು ಮೇ 1 ಹಾಗೂ 2 ರಂದು ನಡೆಯಲಿದ್ದು, ಪರೀಕ್ಷೆ ಸಂದರ್ಭದಲ್ಲಿ ಅಕ್ರಮ ಚಟುವಟಿಕೆ ತಡೆಯಲು ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರದ ಸುತ್ತ 144 ನೇ ಕಲಂನನ್ವಯ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಬೆಳಗಾವಿ ನಗರದಲ್ಲಿ 7 ಪರೀಕ್ಷಾ ಕೇಂದ್ರಗಳಿವೆ. ಟಿಳಕವಾಡಿಯ ಗೋವಿಂದರಾಮ್ ಸೆಕ್‌ಸರಿಯಾ ಸೈನ್ಸ್ ಪಿಯು ಕಾಲೇಜು, ರಾಣಿ ಪಾರ್ವತಿದೇವಿ ಪಿಯು ಕಾಲೇಜು, ಕಾಲೇಜು ರಸ್ತೆಯ ಲಿಂಗರಾಜ ಕಾಲೇಜು, ಶಹಾಪುರದ ಸರ್ಕಾರಿ ಚಿಂತಾಮಣಿರಾವ್ ಪಿಯು ಕಾಲೇಜು, ಚಾವಟಗಲ್ಲಿಯ ಮರಾಠಾ ಮಂಡಳ ಪಿಯು ಕಾಲೇಜು, ರಾಜಾ ಲಖಮಗೌಡ ಸೈನ್ಸ್ ಪಿಯು ಕಾಲೇಜು ಹಾಗೂ ಕ್ಯಾಂಪ್‌ನ ಇಸ್ಲಾಮಿಯಾ ಪಿಯು ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ.
ಈ ಪರೀಕ್ಷಾ ಕೇಂದ್ರಗಳ 200 ಮೀಟರ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಝೆರಾಕ್ಸ್ ಅಂಗಡಿ ತೆರೆಯಬಾರದು. ಯಾವುದೇ ತರಹದ ಆಯುಧ ಹೊಂದಿರುವುದನ್ನು ನಿಷೇಧಿಸಲಾಗಿದೆ.
ಈ ಆದೇಶವು ಮದುವೆ, ಮೆರವಣಿಗೆ ಹಾಗೂ ಶವಸಂಸ್ಕಾರಕ್ಕೆ ಅನ್ವಯಿಸುವುದಿಲ್ಲ ಎಂದು ಬೆಳಗಾವಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಐ.ಎನ್. ಚಂದ್ರಯ್ಯ ಆದೇಶದಲ್ಲಿ ತಿಳಿಸಿದ್ದಾರೆ.
Advertisement