ತಾಳಿಕೋಟೆ: ಪೀರಾಪುರ ಗ್ರಾಮದಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹಾಕಲಾಗಿರುವ ಅವರ ಭಾವಚಿತ್ರಕ್ಕೆ ಹಾಗೂ ಧ್ವಜಕ್ಕೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿರುವ ಘಟನೆ ಭಾನುವಾರ ನಸುಕಿನ ಜಾವ ನಡೆದಿದೆ. ಡಾ. ಅಂಬೇಡ್ಕರ್ ಭಾವ ಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಅಲ್ಲದೆ ಧ್ವಜ ಇಳಿಸಿ ಚಪ್ಪಲಿ ಕಟ್ಟಿದ್ದಾರೆ. ನಂತರ ಧ್ವಜವನ್ನು ಮೇಲಕ್ಕೇರಿಸಿದ್ದಾರೆ. ವಿಷಯ ತಿಳಿದ ದಲಿತ ಸಂಘಟನೆಗಳು ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕೆ. ಮಲ್ಲಿನಾಥ ಪರೀಶಿಲನೆ ನಡೆಸಿ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
Advertisement