ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 1
ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ 2012ನೇ ಸಾಲಿನ ರಾಜ್ಯಮಟ್ಟದ ಡಾ.ಎಚ್. ನರಸಿಂಹಯ್ಯ ಪ್ರಶಸ್ತಿಗೆ ಹಂಪಿ ಕನ್ನಡ ವಿವಿ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರಗುರು ಸೇರಿದಂತೆ 11 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆ ಅಧ್ಯಕ್ಷ ಸಿ. ಮಂಜುನಾಥ ತಿಳಿಸಿದರು.
ಹೊಸಪೇಟೆಯಲ್ಲಿ ಶುಕ್ರವಾರ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿದ ಅವರು, ಬಳ್ಳಾರಿ ಡಯಟ್ನ ಉಪ ಪ್ರಾಚಾರ್ಯ ಎ. ಹನುಮಕ್ಕ, ಬಳ್ಳಾರಿ ವಿಮ್ಸ್ ಪ್ರಾಧ್ಯಾಪಕ ಡಾ. ವಸಂತ ಶೇಟ್, ಡಿಡಿಪಿಐ ಟಿ. ನಾರಾಯಣಗೌಡ, ವಿಜಯನಗರ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕ ಡಾ.ಎಚ್.ಎಂ. ಚಂದ್ರಶೇಖರ ಶಾಸ್ತ್ರಿ, ಕೂಡ್ಲಿಗಿ ಬಿಆರ್ಸಿ ಸಮನ್ವಯಾಧಿಕಾರಿ ಮೈಲೇಶ್ ಬೇವ್ರ, ಬಸರಕೋಡಿನ ನಿವೃತ್ತ ಅಧ್ಯಾಪಕ ಕೊಟ್ರಯ್ಯ ಹಿರೇಮಠ್, ಕಮಲಾಪುರ ಸಹಿಪ್ರಾ ಶಾಲೆ ಶಿಕ್ಷಕಿ ಜಿ ನೀಲಮ್ಮ, ಬಳ್ಳಾರಿ ಮಹಾನಂದಿ ಕೊಟ್ಟಂ ಸಹಿಪ್ರಾ ಶಾಲೆ ಶಿಕ್ಷಕ ಕೆ. ಸೂರ್ಯಪ್ರಕಾಶ್ ಹಾಗೂ ಸಿರುಗುಪ್ಪ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಜಿ. ವೆಂಕಟೇಶ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದರು.
3ರಂದು ಪ್ರಶಸ್ತಿ ಪ್ರದಾನ: ಫೆ. 3ರಂದು ಹೊಸಪೇಟೆ ಮಲ್ಲಿಗೆ ಹೋಟೆಲ್ ಸಭಾಂಗಣದಲ್ಲಿ ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಹಾಗೂ ಸ್ಥಳೀಯ ವನ್ಯಜೀವಿ ಮತ್ತು ನಿಸರ್ಗಪರ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ ಪುಸ್ತಕ ಬಿಡುಗಡೆ, ಸಂವಾದ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಂಗಭೂಮಿ ಕಲಾವಿದ ಬೆಳಗಲ್ ವೀರಣ್ಣ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಭಾನುವಾರ ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ಸಿಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೇದಿಕೆಯ ಗೌರವಾಧ್ಯಕ್ಷ ಡಾ. ವೆಂಕಟಯ್ಯ ಅಪ್ಪಗೆರೆ ಅಧ್ಯಕ್ಷತೆ ವಹಿಸುವರು. ಪಶು ವೈದ್ಯಾಧಿಕಾರಿ ಡಾ.ಜೆ.ಎಸ್. ಅಶ್ವತ್ಥಕುಮಾರ್ ಅವರ ಭಾವನಾತ್ಮಕ ಬದುಕು, ಬೆಂಗಳೂರಿನ ಕತೆಗಾರ ವಿ.ಎಂ. ಮಂಜುನಾಥ್ ಅವರ ಜಾನ್-ಗೋವಾ ಕೃತಿಗಳನ್ನು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಬಿ.ಎಂ. ಪುಟ್ಟಯ್ಯ ಬಿಡುಗಡೆ ಮಾಡುವರು. ಭಾವನಾತ್ಮಕ ಬದುಕು ಕುರಿತು ಮನೋ ವೈದ್ಯ ಡಾ. ಅಜಯ್ಕುಮಾರ್, ಜಾನ್ ಗೋವಾ ಕುರಿತು ಲೇಖಕಿ ಡಾ. ಭಾಗ್ಯಲಕ್ಷ್ಮಿ ಮಾತನಾಡಲಿದ್ದಾರೆ.
ಪರಿಸರವಾದಿ ಸಮದ್ ಕೊಟ್ಟೂರು ಮತ್ತಿತರರ ವಿಶೇಷ ಚಿತ್ರ ಸಹಿತ ರಚಿಸಿರುವ ದರೋಜಿ ಯಾನ್ ಎಕೊಲಾಜಿಕಲ್ ಡೆಸ್ಟಿನೇಷನ್ ಪುಸ್ತಕ ಕುರಿತು ಸಂವಾದ ಇದೆ. ಜಾನಪದ ಕಲಾವಿದೆ ನಾಡೋಜ ದರೋಜಿ ಈರಮ್ಮ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಚಂದ್ರಬಾಬು, ಬೌದ್ಧ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರ್ಶೆಟ್ಟಿ, ಜೆ. ವಸಂತಕುಮಾರ್, ಡಾ. ಮಧುಸೂಧನ ಕಾರಿಗನೂರು, ಡಿ. ಸೂರಿ ಮತ್ತು ಎಸ್. ವೀರಾಸ್ವಾಮಿ ಮುಖ್ಯ ಪಾಲ್ಗೊಳ್ಳುವರು ಎಂದು ತಿಳಿಸಿದರು.