ಹಗರಿಬೊಮ್ಮನಹಳ್ಳಿ: ಸಚಿತ ಎಜ್ಯುಕೇಷನ್ ಟ್ರಸ್ಟ್ ಹಾಗೂ ಬಳ್ಳಾರಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಜಂಟಿಯಾಗಿ ನಡೆಸಿದ ಜಿಲ್ಲಾ ಮಟ್ಟದ ಅಂತರ್ ಶಾಲಾ ರಿಂಕ್ ಮತ್ತು ರೋಡ್ ರೇಸ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದ ಎಂ.ವೈ. ಘೋರ್ಪಡೆ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಉತ್ತಮ ಪ್ರದರ್ಶನ ನೀಡುವ ಮೂಲಕ ತಾಲೂಕಿಗೆ ಕೀರ್ತಿಗೆ ತಂದಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಯ ಸಿ.ಜಿ. ಸುರೇಂದ್ರ ತಿಳಿಸಿದ್ದಾರೆ.
ವಿದ್ಯಾರ್ಥಿಗಳಾದ ಪ್ರಮೋದ್, ಸಂಜಯ ಅಂಗಡಿ, ಮಹಾಂತೇಶ್, ದರ್ಶನ್, ನೂರುಲ್ಲಾ ಹಸನ್, ಗುರುಬಸವರಾಜ, ಎಸ್. ಪ್ರವೀಣ್, ದೈಹಿಕ ಶಿಕ್ಷಕ, ಸ್ಕೇಟಿಂಗ್ ತರಬೇತುದಾರ ಸುಭಾಶ್ಚಂದ್ರ ಮಾರ್ಗದರ್ಶನದಲ್ಲಿ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನಗಳಿಸಿದ್ದಾರೆ.
ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಶಾಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿರುವ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಿರಾಜ್ಶೇಕ್, ಮುಖ್ಯೋಪಾಧ್ಯಾಯ ಸುರೇಂದ್ರ, ತರಬೇತುದಾರ ಸುಭಾಶ್ಚಂದ್ರ ಹಾಗೂ ಶಿಕ್ಷಕ, ಸಿಬ್ಬಂದಿ ಅಭಿನಂದಿಸಿದ್ದಾರೆ.