ರಾಜ್ಯ ಬಜೆಟ್ 2013

Updated on: 

ಪ್ರತಿ ಮಹಾನಗರ ಪಾಲಿಕೆಗೆ ರು. 200 ಕೋಟಿ ಅನುದಾನ ನೀಡಿರುವುದು ಸಂತೋಷ ತಂದಿದೆ. ಬಜೆಟ್‌ನಲ್ಲಿ ರು. 200 ಕೋಟಿ ಘೋಷಣೆ ಮಾಡಿರುವುದರಿಂದ ಮಹಾನಗರಗಳನ್ನು ಸಾಕಷ್ಟು ಅಭಿವೃದ್ಧಿಪಡಿಸಬಹುದು.
- ಸಿ. ಇಬ್ರಾಹಿಂಬಾಬು, ಮೇಯರ್

ಇದು ಬಿಜೆಪಿ ಚುನಾವಣೆ ಪ್ರಣಾಳಿಕೆಯಾಗಿದೆ. ತಾಂತ್ರಿಕ ದೋಷದ ಲಾಭ ಪಡೆದು ಬಜೆಟ್ ಮಂಡಿಸಲಾಗಿದೆ. ಯಾರು ಅನುಷ್ಠಾನಗೊಳಿಸುತ್ತಾರೆ ಎಂಬುದು ಪ್ರಶ್ನೆ. ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ.
- ಎಸ್. ಪನ್ನರಾಜ್, ಲೆಕ್ಕ ಪರಿಶೋಧಕ

ಹನಿ ನೀರಾವರಿಗೆ ಸಹಾಯಧನ, ಸಾವಯವ ಕೃಷಿಕ ಗುಂಪು, ರೈತ ಪಾಸ್‌ಬುಕ್, ರೈತ ಆದಾಯ ಆಯೋಗ ರಚನೆ, ವಿಮಾ ಯೋಜನೆ ಸ್ವಾಗತಾರ್ಹ. ಆದರೆ ಎಲ್ಲವೂ ರೈತನಿಗೆ ತಲುಪುತ್ತವೆಯೋ ಎಂದು ಕಾದುನೋಡಬೇಕು.
-ಎಸ್.ಪಿ. ನಾಗನಗೌಡ, ಅರ್ಥಶಾಸ್ತ್ರಜ್ಞ

ಜಿಲ್ಲೆಯ ಕಂಪ್ಲಿ, ಕುರುಗೋಡು, ಕೊಟ್ಟೂರು ತಾಲೂಕೆಂದು ಘೋಷಣೆ ಮಾಡಿರುವ ಜಗದೀಶ್ ಶೆಟ್ಟರ್ ಅವರ ಕ್ರಮ ಸ್ವಾಗತಾರ್ಹ. ಆದರೆ ಇವು ಬಜೆಟ್‌ನಲ್ಲಿ ಕೇವಲ ಘೋಷಣೆಗೆ ಸೀಮಿತವಾದಂತೆ ಕಾಣುತ್ತಿವೆ.
- ನಾರಾ ಸೂರ್ಯನಾರಾಯಣ ರೆಡ್ಡಿ

ಉಜ್ಜಯಿನಿ ಪೀಠದ ಅಭಿವೃದ್ಧಿಗೂ ರು. 2 ಕೋಟಿ ಮೀಸಲಿರಿಸಿದ್ದು ಸಂತಸ ತಂದಿದೆ. ಸಿಎಂ ಶೆಟ್ಟರ್ ಕೊಟ್ಟೂರನ್ನು ತಾಲೂಕನ್ನಾಗಿ ಘೋಷಿಸಿ, ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕಲ್ಪಿಸಿದ್ದಾರೆ. ಜನಪರ ಬಜೆಟ್.
- ಜಗುದ್ಗರು ಸಿದ್ಧಲಿಂಗ ಶಿವಾಚಾರ್ಯರು

ಹಳೆ ರಾಜ್ಯ ಹೆದ್ದಾರಿಗಳಿಗೆ ಶ್ರೀರಂಗ ಟೋಲ್ ಹಾಕಿರುವುದು ಖಂಡನೀಯ. ಮಠ ಮಾನ್ಯಗಳಿಗೆ ಅನುದಾನ ನೀಡುವುದು ಪರಂಪರೆಯಾಗಬಾರದು. ಇದೊಂದು ರಾಜಕೀಯ ಪ್ರೇರಿತ ಅನುದಾನ.
- ಎನ್. ಪ್ರತಾಪ ರೆಡ್ಡಿ, ಉದ್ಯಮಿ

ಬಜೆಟ್ ನೋಡಲು ಚೆನ್ನಾಗಿದೆ. ಆದರೆ ಇದು ಪಕ್ಕಾ ಚುನಾವಣೆ ಬಜೆಟ್ ಆಗಿದ್ದು, ರೈತರಿಗೆ, ಸಾಮಾನ್ಯ ಜನತೆಗೆ ಮೂಗಿನ ಮೇಲೆ ತುಪ್ಪ ಸವರಿದಂತೆ ಇದೆ. ಕೃಷಿ ಬಜೆಟ್ ಫಲಕಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು.
- ಎ.ಎಂ. ಗುರುಪ್ರಸಾದ್, ತಾಪಂ ಸದಸ್ಯ

ಈ ಬಾರಿಯ ಬಜೆಟ್ ಜನಹಿತ ಕಾಪಾಡುವಂತಿದ್ದು, ರಾಜ್ಯದಲ್ಲಿ 43 ಹೊಸ ತಾಲೂಕುಗಳನ್ನು ರಚನೆ ಮಾಡುವ ಮೂಲಕ ರಾಜ್ಯದ ಇತಿಹಾಸದಲ್ಲೇ ನೆನಪುಳಿಯುವಂತಹ ಕಾರ್ಯವನ್ನು ಮುಖ್ಯಮಂತ್ರಿ ಶೆಟ್ಟರ್ ಮಾಡಿದ್ದಾರೆ.
- ರೇವಣಸಿದ್ದಪ್ಪ ಬೆನಕನಹಳ್ಳಿ

ಸರ್ವರಿಗೂ ರಾಜ್ಯದ ಸಮಪಾಲನ್ನೂ ಸಮನಾಗಿ ಹಂಚಿಕೆ ಮಾಡುವ ರೀತಿ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುವ ಮೂಲಕ ಸರ್ವರ ಹಿತ ಕಾಪಾಡಿದ್ದಾರೆ. ಶೆಟ್ಟರ್ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ.
- ಕೊಟ್ರೇಶ್ ಕಾಮಶೆಟ್ಟಿ, ಪಪಂ ಸದಸ್ಯ

ಮಠ ಮಾನ್ಯಗಳಿಗೆ ಅನಗತ್ಯವಾಗಿ ಕೋಟ್ಯಂತರ ರುಪಾಯಿಗಳ ಉದಾರ ದೇಣಿಗೆಯನ್ನು ಬಜೆಟ್‌ನಲ್ಲಿ ನೀಡಿರುವುದು ನಿಜಕ್ಕೂ ನೋವಿನ ಸಂಗತಿ. ಸರ್ಕಾರ ರೈತರ ಸಹಾಯಕ್ಕೆ ಮುಂದಾಗಬೇಕಿತ್ತು.
-ಎಸ್.ಎಸ್. ಕೊಟ್ರೇಶ್, ವ್ಯಾಪಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com