ಹೊಸಪೇಟೆ: ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ ತಂಡ (ಸಿಇಸಿ) ಶುಕ್ರವಾರ ಸಂಡೂರು ತಾಲೂಕಿನ ಕೆಲ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಿಇಸಿ ಮುಖ್ಯಸ್ಥ ಪಿ.ವಿ. ಜಯಕೃಷ್ಣನ್ ಮತ್ತು ಡಾ. ಯು.ವಿ. ಸಿಂಗ್ ನೇತೃತ್ವದ ಒಂದು ತಂಡ ಸಂಡೂರು ತಾಲೂಕಿನ ಎಸ್ಬಿ ಮಿನರಲ್ಸ್, ಪಿಬಿಎಸ್ ಮೈನ್ಸ್, ಕಣ್ಣಯ್ಯಲಾಲ್ ದುದೇರಿಯಾ ಮೈನ್ಸ್, ಎಂಎಂಎಲ್ ಮೈನ್ಸ್, ನಧೀಂ ಮೈನ್ಸ್, ಎಂಎಸ್ಪಿಎಲ್ ಮೈನ್ಸ್ ಸೇರಿದಂತೆ ಕೆಲ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಆರ್ ಅಂಡ್ ಆರ್ ಪ್ಲಾನ್ ಪರಿಶೀಲನೆ ನಡೆಸಿದರು.
ಮಹೇಂದ್ರ ವ್ಯಾಸ್, ಎಂ.ಕೆ. ಮಟ್ಟೋ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಎಚ್.ಆರ್. ಶ್ರೀನಿವಾಸ್ ನೇತೃತ್ವದ ತಂಡ ಸಂಡೂರು ತಾಲೂಕಿನ ಬಿಕೆಜಿ ಮೈನ್ಸ್, ಎಚ್ಆರ್ಜಿ ಮೈನ್ಸ್, ವೆಸ್ಕೋ ಮೈನ್ಸ್, ಜೆಡ್ಟಿಸಿ ಮೈನ್ಸ್, ಎಂಎಂಎಲ್ ಮೈನ್ಸ್, ನಧೀಂ ಮಿನರಲ್ಸ್ ಸೇರಿದಂತೆ ಇತರೆ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಿಇಸಿ ತಂಡದೊಂದಿಗೆ ಜಿಲ್ಲಾಧಿಕಾರಿ ಬಿಸ್ವಾಸ್, ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇದ್ದರು.