ಕೂಡ್ಲಿಗಿ: ಪರಿಸರಕ್ಕೆ ಪೂರಕವಾದ ವಿಜ್ಞಾನ ಬೆಳೆಯಬೇಕು. ಪರಿಸರ ಕಾಳಜಿ ಇದ್ದಾಗ ಮಾತ್ರ ವಿಜ್ಞಾನ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಲೇಖಕ ಡಾ ವೆಂಕಟಗಿರಿ ದಳವಾಯಿ ಹೇಳಿದರು. ಇಲ್ಲಿನ ಜ್ಞಾನಮಂಟಪ ಶಾಲೆಯ ವಾರ್ಷಿಕೋತ್ಸವ 'ಭಾವಸಿಂಚನ-2013' ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ವಿಜ್ಞಾನ ವಿಷಯ ಕಠಿಣವಾದರೂ, ಮಾನವ ಪರವಾಗಿದೆ. ಅದನ್ನು ಸದುಪಯೋಗ ಮಾಡಿಕೊಂಡಕೆ ಉನ್ನತಿಗೆ ಪೂರಕವಾಗುತ್ತದೆ. ಧರ್ಮದೊಂದಿಗೆ ವಿಜ್ಞಾನ ಬೆರೆತರೆ ಜಗತ್ತು ನೆಮ್ಮದಿಯಿಂದಿರಲು ಸಾಧ್ಯ. ಶಾಲೆಗಳಲ್ಲಿ ಶಿಕ್ಷಕರು ಮಾನವೀಯ ಸ್ಪರ್ಶದಿಂದ ಮಕ್ಕಳ ವ್ಯಕ್ತಿತ್ವ ಬದಲಾಯಿಸಬೇಕಿದೆ ಎಂದು ತಿಳಿಸಿದರು. ಕೂಡ್ಲಿಗಿ ಮೈಕಲ್ ಚರ್ಚ್ನ ಫಾ. ಮ್ಯಾಕ್ಸಿಮ್ ಡಾಯಸ್, ನಿರಂತರ ಕ್ರಿಯಾಶೀಲತೆಯಿಂದ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು. ಎಪಿಎಂಸಿ ಸದಸ್ಯ ಕಾಮಶೆಟ್ಟಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿ. ನಾಗರಾಜ್, ಭೀಮಸಮುದ್ರ ರಂಗನಾಥ, ಕೆ.ಎಂ. ಮಂಜುನಾಥ ಕಗ್ಗಲ್, ಪ್ರಾಚಾರ್ಯ ನಾಗನಗೌಡ, ವಾಣಿ ನಾಗರಾಜ್, ಮುಖ್ಯ ಶಿಕ್ಷಕರಾದ ಶ್ರೀನಿವಾಸ್, ತಳಸದ ಸುರೇಶ್, ಶೃತಿ ಎಸ್. ಬಂಗಾರಿ, ಫಸಿನಾ ಅಂಜುಮ್, ಎಂ.ಎಸ್. ಮಹೇಶ್, ಶಿವಕುಮಾರ್, ಹಜರತ್ ಅಲಿ, ಜಿ.ಎಸ್. ಮಂಜುಳಾ ಕುಮಾರಿ, ಎಂ. ಹೂಲೆಪ್ಪ, ಪಿ. ಮಂಜುನಾಥ, ಎನ್.ಸಿ. ಗೋಪಿನಾಥ, ಡಿ. ವಿಶ್ವನಾಥ, ಬಿ.ಬಿ. ಕೊಟ್ರೇಶ್, ತಸ್ಲೀಂ, ಬಿ.ಟಿ. ಸುಜಯ್, ಪರ್ವೀನ್, ಹಂಪಮ್ಮ ಇದ್ದರು. ವಿದ್ಯಾರ್ಥಿಗಳ ಪೋಷಕರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಸರೋಜಾ, ಕವಿತಾ ಮತ್ತಿತರರಿಗೆ ಬಹುಮಾನ ವಿತರಿಸಲಾಯಿತು.