ಕಠಿಣ ಪರಿಶ್ರಮದಿಂದ ಯಶಸ್ಸು

Updated on: 

ಹೂವಿನಹಡಗಲಿ: ವಿದ್ಯಾರ್ಥಿಗಳು  ಜೀವನದಲ್ಲಿ ಕಠಿಣ ಪರಿಶ್ರಮ, ಸತತ ಅಧ್ಯಯನದ ಮೂಲಕ ಯಶಸ್ಸು ಗಳಿಸಲು ಸಾಧ್ಯವೆಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಜಿಬಿಆರ್ ಪಪೂ ಕಾಲೇಜಿನ ಕರ್ನಾಟಕ ಸಂಘದ 42ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿರ್ದ್ಯ್ಙಾಗಳು ಇಲ್ಲದ ಅವಕಾಶ ಸೃಷ್ಟಿಕೊಂಡು ಜೀವನದಲ್ಲಿ ಮುಂದೆ ಬರಬೇಕು. ನಿರಾಶವಾದಿಗಳಾಗದೇ ಸಮಾಜಕ್ಕೆ ಅಟ್ಟಿಕೊಂಡಿರುವ ಸಾಮಾಜಿಕ ಪಿಡುಗುಗಳಾದ  ಜಾತೀಯತೆ, ಭ್ರಷ್ಟಾಚಾರ, ಅಪರಾಧಗಳನ್ನು ಮೀರಿ ನಿಲ್ಲುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದರು.
ಅಖಂಡತೆಗೆ ಧಕ್ಕೆ: ಇಂದಿನ ಸಾಮಾಜಿಕ ವ್ಯವಸ್ಥೆ ಸರಿಪಡಿಸಲಾರದಷ್ಟು ಹಾಳಾಗಿದೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತೀಯತೆ ತಾಂಡವವಾಡುತ್ತಿದೆ. ಜಾತಿಗೊಂದು ಪಕ್ಷ, ಮಠ ಮಾನ್ಯಗಳು ಹುಟ್ಟಿಕೊಂಡು ದೇಶದ ಅಖಂಡತೆಗೆ ಧಕ್ಕೆ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾತಿವಾರು ರಾಜ್ಯ ವಿಂಗಡಣೆ ಹೋರಾಟ ನಡೆದರೂ ಅಚ್ಚರಿಪಡಬೇಕಿಲ್ಲ ಎಂದರು.
ಬಾಲ್ಯದ ತಮ್ಮ ವಿರ್ದ್ಯ್ಙಾ ಜೀವನವನ್ನು ನೆನಪಿಸಿಕೊಂಡ ಅವರು, ನನಗೆ ಓದಿನ ದಿನಗಳಲ್ಲಿ ಯಾವುದೇ ಪ್ರಶಸ್ತಿಗಳು ಸಿಗಲಿಲ್ಲ. ಅದಕ್ಕಾಗಿ ವಿಚಲಿತನಾಗದೇ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದ್ದರಿಂದ ಪ್ರಶಸ್ತಿ ನೀಡುವ ಹಂತಕ್ಕೆ ಬೆಳೆದಿದ್ದೇನೆ. ನೀವು ಸಹ ಉದಾತ್ತ ಮೌಲ್ಯಗಳನ್ನು ರೂಢಿಸಿಕೊಂಡು ಯಶಸ್ಸಿನತ್ತ ಸಾಗುವಂತೆ ತಿಳಿಸಿದರು.
ಶಿಕ್ಷಣಕ್ಕೆ ಒತ್ತು: ವೀವಿ ಸಂಘದ ಕಾರ್ಯದರ್ಶಿ ಗುರುಸಿದ್ದಸ್ವಾಮಿ ಮಾತನಾಡಿ, ವ್ಯವಹಾರಿಕವಾಗಿ ನೋಡದೇ ಗ್ರಾಮೀಣ ಭಾಗದ ವಿರ್ದ್ಯ್ಙಾಗಳ ಶಿಕ್ಷಣಕ್ಕೆ ಸಂಘ ಹೆಚ್ಚಿನ ಒತ್ತು ನೀಡಿದೆ. ಹೂವಿನಹಡಗಲಿ ಜಿಬಿಆರ್ ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣ ರೂಪಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ಹೇಳಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಐಗೋಳ ಚಿದಾನಂದ ಮಾತನಾಡಿ, ವಿರ್ದ್ಯ್ಙಾಗಳು ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಲು ಪೂರಕ ವಾತಾವರಣವನ್ನು ಇಲ್ಲಿ ಕಲ್ಪಿಸಲಾಗಿದೆ. ವಿರ್ದ್ಯ್ಙಾಗಳು ಸದುಪಯೋಗಪಡಿಸಿಕೊಂಡು ಹೆತ್ತವರಿಗೆ ಮತ್ತು ಕಾಲೇಜಿಗೆ ಕೀರ್ತಿ ತರುವಂತೆ ಕರೆ ನೀಡಿದರು.
ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀವಿ  ಸಂಘದ ಸಹ ಕಾರ್ಯದರ್ಶಿ ನೇಪಾಕ್ಷಪ್ಪ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಗಡಿಗಿ ವೀರಣ್ಣ, ಎಂ.ಪಿ.ಎಂ. ವೀರಭದ್ರ ದೇವರು, ಹಲಗೇರಿ ಸೋಮಶೇಖರ, ಸಿ. ಮೋಹನರೆಡ್ಡಿ, ಪದವಿ ಕಾಲೇಜು ಪ್ರಾಚಾರ್ಯ ಪಿ. ಬಸವರಾಜ, ಹೊಸಪೇಟೆ ಶೈಕ್ಷಣಿಕ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಸೊನ್ನದ ಈಶಪ್ಪ ಉಪಸ್ಥಿತರಿದ್ದರು.
ಕಳೆದ ಶೈಕ್ಷಣಿಕ ಸಾಲಿನ ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿಹೆಚ್ಚು ಅಂಕ ಗಳಿಸಿದ ಕಾಲೇಜಿನ ವಿರ್ದ್ಯ್ಙಾ ಎಸ್.ಬಿ. ಅಜ್ಜಪ್ಪನನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ರ್ದ್ಯ್ಙಾಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಾಚಾರ್ಯ ಡಾ. ಎ.ಎಂ. ರಾಜಶೇಖರಯ್ಯ ಪ್ರಾಸ್ತಾವಿಕ ಮಾತನಾಡಿದರು. ಡಾ.ಎಚ್.ಕೆ. ಮಹೇಶ, ಗುರುಬಸವರಾಜಯ್ಯ ನಿರೂಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com