ಕೊಟ್ಟೂರು: ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 17 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, 78 ಅಭ್ಯರ್ಥಿಗಳು ಮಾರ್ಚ್ 7ರಂದು ನಡೆಯುವ ಚುನಾವಣೆ ಎದುರಿಸಲಿದ್ದಾರೆ ಎಂದು ಚುನಾವಣಾಧಿಕಾರಿ ಸಲೀಂ, ಯೋಗೇಶ್ವರ ತಿಳಿಸಿದರು. ಮೂರನೇ ವಾರ್ಡ್ ಬಿ. ಸಿದ್ದೇಶ್ (ಪಕ್ಷೇತರ), 4ನೇ ವಾರ್ಡ್ನ ಬಿ. ರಾಧಾ (ಪಕ್ಷೇತರ), 5ನೇ ವಾರ್ಡ್ ಬಿ. ಭಾಷಾ ಸಾಹೇಬ್, ಬಾಗಳಿ ಹಸನ್ಸಾಬ್ (ಪಕ್ಷೇತರ), 7ನೇ ವಾರ್ಡ್ ಕೆ. ಶಾಂಭವಿ, ಎಸ್. ಪ್ರಕಾಶ್, ಸಂಗೀತಾ ಪಿ., ಡಿ. ಮಲ್ಲಿಕಾರ್ಜುನ (ಪಕ್ಷೇತರ), 8ನೇ ವಾರ್ಡ್ ತೋಟಪ್ಪ ಕುರುಣಿ, ಎ.ಎಚ್. ಉಮಾದೇವಿ (ಪಕ್ಷೇತರ), 9ನೇ ವಾರ್ಡ್ ಮಮತಾ ಹರಪನಹಳ್ಳಿ (ಪಕ್ಷೇತರ), 11ನೇ ವಾರ್ಡ್ ತೂಲಹಳ್ಳಿ ಶಂಕ್ರಪ್ಪ (ಪಕ್ಷೇತರ), 14ನೇ ವಾರ್ಡ್ ಎಸ್.ಜಿ. ಮಾಳಗಿ (ಪಕ್ಷೇತರ), 15ನೇ ವಾರ್ಡ್ ಭಾಗ್ಯಮ್ಮ (ಬಿಎಸ್ಸಾರ್), 17ನೇ ವಾರ್ಡ್ ಜೆ. ಮರುಳಸಿದ್ದಪ್ಪ (ಕೆಜೆಪಿ), 20ನೇ ವಾರ್ಡ್ ಟಿ. ಕರಿಸ್ವಾಮಿ (ಪಕ್ಷೇತರ), ಅಮ್ಮನಕೇರಿ ಕೊಟ್ರಪ್ಪ (ಬಿಜೆಪಿ) ಬುಧವಾರ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ.