ಬಳ್ಳಾರಿ: ರಾಜ್ಯದ ಎಲ್ಲ ಜಿಲ್ಲೆಗಳ ರೈತರ ಡಾಟಾಬೇಸ್ ತಯಾರಿಸಲು ರೈತರಿಂದ ಸಲಹೆ, ದೂರುಗಳನ್ನು ಆಹ್ವಾನಿಸಲಾಗಿದೆ. ಈ ಡಾಟಾಬೇಸ್ನಲ್ಲಿ ರಾಜ್ಯದ ಸುಮಾರು 6 ಲಕ್ಷ ರೈತರ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಮೂಲ ದಾಖಲಾತಿ ಹಾಗೂ ಸಂಬಂಧಪಟ್ಟ ದಾಖಲಾತಿ ಇದ್ದು, ಪಹಣಿ ಪತ್ರಿಕೆಗಳಲ್ಲಿ ಹೆಸರಿಲ್ಲದೇ ಇರುವುದು, ಮತ್ತಿತರ ಸಮಸ್ಯೆ ಎದುರಿಸುತ್ತಿರುವ ರೈತರು ಸಲಹೆ, ದೂರುಗಳನ್ನು ಫೆ. 28ರೊಳಗಾಗಿ ಬಿ.ಎ. ಮಂಜುನಾಥ, ಮುಖ್ಯಸ್ಥರು, ಕರ್ನಾಟಕ ರಾಜ್ಯ ಮಾಹಿತಿ ಕ್ರೋಡೀಕರಣ ಮತ್ತು ಸಂಪರ್ಕ ಕೋಶ, ಜ್ಯೋತಿ ನಗರ, ಶಿರಾ- 572137, ತುಮಕೂರು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗಾಗಿ ಮೊ.ಸಂ-9900350591ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.