ಈಜಿಪುರ ತೆರವು ಖಂಡಿಸಿ ಪ್ರತಿಭಟನೆ

Updated on: 

ಹೊಸಪೇಟೆ: ಬೆಂಗಳೂರಿನ ಈಜಿಪುರದ ಇಡಬ್ಲ್ಯುಎಸ್ ಕ್ವಾರ್ಟರ್ಸ್‌ನ 2 ಸಾವಿರಕ್ಕೂ ಹೆಚ್ಚು ಜನರನ್ನು ತೆರವುಗೊಳಿಸಿದ ಸರ್ಕಾರದ ಕ್ರಮ ಖಂಡಿಸಿ, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಒಂದು ಒತ್ತಾಯಿಸಿ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಬಸವರಾಜ್ ಸೋಮಣ್ಣನವರ್‌ಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಈಜಿಪುರದಲ್ಲಿ 15 ವರ್ಷಗಳಿಂದ ವಾಸವಿರುವ ಜನರಲ್ಲಿ ಬಹುತೇಕರು ದಲಿತರು ಹಾಗೂ ಅಲ್ಪಸಂಖ್ಯಾತರು. ಸ್ಲಂ ನಿವಾಸಿಗಳ ಶೆಡ್ ತೆರವುಗೊಳಿಸಿರುವುದರಿಂದ ಈ ಜನರು ಬೀದಿಗೆ ಬಂದಿದ್ದು, ಬದುಕು ಅತಂತ್ರವಾಗಿದೆ. ಅಲ್ಲಿನ ಎಲ್ಲ ನಿವಾಸಿಗಳಿಗೆ ಮೂಲಭೂತ ಸೌಕರ್ಯ- ಪುನರ್ವಸತಿ ಕಲ್ಪಿಸುವಂತೆ ಹಾಗೂ ತುರ್ತಾಗಿ ಸಚಿವ ಸಂಪಟ ಸಭೆ ಕರೆಯುವಂತೆ ಅವರು ಒತ್ತಾಯಿಸಿದ್ದಾರೆ.
ಸ್ಲಂ ಜನ ಜಾಗೃತಿ ಅಂದೋಲನ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್, ಉಪಾಧ್ಯಕ್ಷ ಅಬ್ದುಲ್ ರವೂಫ್, ಕೆ.ಎಚ್. ಸುನೀಲ್, ಅಬ್ದುಲ್ ಲತೀಫ್, ಸಂಚಾಲಕಿ ಎನ್. ಹುಲಿಗೆಮ್ಮ, ನೂರ್ ಜಹಾನ್, ಯುವ ಘಟಕದ ಪರಶುರಾಮ್, ವೆಂಕಟೇಶ್, ಗಿರೀಶ್, ವೆಂಕಮ್ಮ, ಮಾರೆಮ್ಮ, ನಾಗಲಕ್ಷ್ಮಿ, ಕೆ.ಜಿ. ವೆಂಕಟೇಶ್, ಅರುಣ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com