ಬಳ್ಳಾರಿ: ಶೂದ್ರರು ರಾಜ್ಯಭಾರ ಮಾಡಬೇಕೆಂಬುದು ಸ್ವಾಮಿ ವಿವೇಕಾನಂದರ ಅಭಿಮತವಾಗಿತ್ತೆಂದು ಸಮುದಾಯ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ. ಸುರೇಂದ್ರರಾವ್ ಹೇಳಿದರು. ಪಟ್ಟಣದ ಅಭಯಾಂಜನೇಯ ದೇವಸ್ಥಾನದಲಿ ಸಮುದಾಯ ಸಾಂಸ್ಕೃತಿಕ ಸಂಘಟನೆಯಿಂದ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಅಂಗವಾಗಿ ನಡೆದ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮುದಾಯ ವಲಯ ಸಂಚಾಲಕ ಎಸ್. ದೇವೇಂದ್ರಗೌಡ, ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ನೀಡಿದರು. ಎಂ. ವೆಂಕಟರೆಡ್ಡಿ, ಕಾರ್ಯದರ್ಶಿ ಹುಲಿಕಟ್ಟಿ ಚನ್ನಬಸಪ್ಪ, ಡಾ. ಬಸವಣ್ಣೆಪ್ಪ ಮಾತನಾಡಿದರು.