ಬಳ್ಳಾರಿ: ತಾಲೂಕಿನ ಯಾಳ್ಪಿಯ ಶ್ರೀ ಸರಸ್ವತಿ ವಿದ್ಯಾನಿಕೇತನ ಶಾಲೆಯಲ್ಲಿ ತ್ತೀಚಿಗೆ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಶಾಲಾ ಮುಖ್ಯೋಪಾಧ್ಯಾಯಿನಿ ಸರಸ್ವತಿ ರವಿಕುಮಾರ್ ಹಾಗೂ ಶಾಲೆಯ ಅಧ್ಯಕ್ಷ ಬಿ. ಗಂಗಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಅಂಗಡಿ ಎರ್ರಿಸ್ವಾಮಿ, ರೇಖಾ, ವಿದ್ಯಾರ್ಥಿನಿ ಅಂಜಲಿ, ಶ್ರೇಯಾ, ಲಿಂಗಮ್ಮ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ವೈ. ಮಲ್ಲಿಕಾರ್ಜುನಗೌಡ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಸದಸ್ಯ ಸೈಯದ್ ಅಲಿ, ಪಂಪಾಪತಿ, ಹಬೀಬುಲ್ಲಾ ಯಾಳ್ಪಿ, ಯಲ್ಲಾರೆಡ್ಡಿ ಸೇರಿದಂತೆ ಇತರರು ಇದ್ದರು. ಶಿಕ್ಷಕಿ ಸರಿತಾ ಪ್ರಾರ್ಥಿಸಿ, ಅಂಗಡಿ ಎರ್ರಿಸ್ವಾಮಿ ಸ್ವಾಗತಿಸಿ, ನಿರೂಪಿಸಿ, ರವಿಕುಮಾರ್ ವಂದಿಸಿದರು.