ನ್ಯಾಯಾಲಯದ ವಾಹನ ತಂಗುದಾಣ ಉದ್ಘಾಟನೆ

Updated on: 


ಬಳ್ಳಾರಿ: ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾ ನ್ಯಾಯಾಂಗ ಇಲಾಖೆ ವತಿಯಿಂದ ನಗರದ ಜಿಲ್ಲಾ ನ್ಯಾಯಾಲಯದ ಮುಂದೆ ನೂತನವಾಗಿ ನಿರ್ಮಾಣಗೊಂಡಿರುವ ವಾಹನಗಳ ತಂಗುದಾಣವನ್ನು ಬುಧವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಶ್ವೇಶ್ವರ ಭಟ್ ಉದ್ಘಾಟಿಸಿದರು. ನ್ಯಾಯಾಧೀಶ ವಿಶ್ವೇಶ್ವರ ಭಟ್ ಮಾತನಾಡಿ, ತಂಗುದಾಣ ನಿರ್ಮಾಣವಾಗಿದ್ದರಿಂದ ಪ್ರತಿದಿನ ನ್ಯಾಯಾಲಯಕ್ಕೆ ಆಗಮಿಸುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದರು. ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ,  ಬುಡಾ ಅಧ್ಯಕ್ಷ ಡಿ. ವಿನೋದ್ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ್, ಎಸ್ಪಿ ಡಾ. ಚಂದ್ರಗುಪ್ತ, ಎ.ಜಿ. ಶಿವಕುಮಾರ್ ಮಾತನಾಡಿದರು. ಡಿವೈಎಸ್ಪಿ ಮುರುಗಣ್ಣನವರ್, ವಕೀಲರ ಸಂಘದ ಕಾರ್ಯದರ್ಶಿ ಬದ್ರಿನಾಥ್, ಉಪಾಧ್ಯಕ್ಷ ಎರ್ರೆಗೌಡ ಇದ್ದರು. ನ್ಯಾಯವಾದಿ ವಿಜಯಲಕ್ಷ್ಮೀ ಪ್ರಾರ್ಥಿಸಿದರು. ನ್ಯಾಯಾಧೀಶ ಹೊಸಮನಿ ಸಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com