ಸಾಮಾಜಿಕ ಜೀವನದ ಅರಿವು ಅಗತ್ಯ

Updated on: 

ಬಳ್ಳಾರಿ: ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಸಾಮಾಜಿಕ ಜೀವನದ ಅರಿವು ಅಗತ್ಯವಾಗಿದೆ ಎಂದು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ. ವಿಜಯಕುಮಾರ್ ತಿಳಿಸಿದರು. ನಗರದ ಸರ್ಕಾರಿ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ತಾಲೂಕಿನ ಎತ್ತಿನಬೂದಿಹಾಳ್ ಗ್ರಾಮದ ಶ್ರೀಕಟ್ಟೇಬಸವೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಹಳ್ಳಿಗಳ ಪರಿಚಯವಾಗಬೇಕು, ಹಳ್ಳಿಗಳ ಸಂಸ್ಕೃತಿ, ಅಲ್ಲಿನ ಜನಜೀವನ ಅರಿಯಬೇಕು ಎಂದರು. ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಎಚ್. ರಾಮಕೃಷ್ಣ ಮಾತನಾಡಿದರು. ಎತ್ತಿನಬೂದಿಹಾಳ್ ಗ್ರಾಮದ ವಡ್ಡರ ರಮೇಶ್, ಗವಿಸಿದ್ದಪ್ಪ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಡಿ. ಗಂಗಣ್ಣ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮದ ನಾರಾಯಣಪ್ಪ, ಉಪನ್ಯಾಸಕ ಪಂಪನಗೌಡ, ಡಾ. ಶ್ಯಾಮೂರ್ತಿ, ಎ. ಮೌನೇಶ್, ಶಂಕರ, ಎನ್‌ಎಸ್‌ಎಸ್ ಅಧಿಕಾರಿಗಳಾದ ಜಿ. ಕೊಟ್ರಪ್ಪ, ವೈ. ಜನಾರ್ದನ ರೆಡ್ಡಿ ಇದ್ದರು. ಲಕ್ಷ್ಮಿ ತಂಡದವರು ಪ್ರಾರ್ಥಿಸಿದರು. ಈಶಪ್ಪ ಮತ್ತು ತಂಡದವರು ನಾಡಗೀತೆ ಹಾಡಿದರು. ಮಂಜುನಾಥ ತಂಡದವರು ಎನ್‌ಎಸ್‌ಎಸ್ ಗೀತೆ ಹೇಳಿದರು. ಜಿ. ಕೊಟ್ರಪ್ಪ ಸ್ವಾಗತಿಸಿ, ಕೆ.ಎನ್. ರಾಮಾಂಜನೇಯ ನಿರೂಪಿಸಿದರು. ಶಶಿಕಾಂತ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com