ಬಳ್ಳಾರಿ: ನಗರದ ಕಿರಾಣಿ ವ್ಯಾಪಾರಿ ಜೆ. ಕೃಷ್ಣ (53) ಗುರುವಾರ ನಸುಕಿನ ಜಾವ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ನಿಧನ ಹೊಂದಿದ್ದಾರೆ. ನಗರದ ತೇರುಬೀದಿಯಲ್ಲಿರುವ ಕುಡತಿನಿ ವೆಂಕೋಬಣ್ಣ ಶೆಟ್ಟಿ ಕೋ ಕಿರಾಣಿ ಅಂಗಡಿ ಮಾಲೀಕರಲ್ಲಿ ಒಬ್ಬರಾಗಿದ್ದ ಜೆ. ಕೃಷ್ಣ, ಆರ್ಯ ವೈಶ್ಯ ಸಂಘದಲ್ಲಿ ಸಕ್ರಿಯ ಸದಸ್ಯರಾಗಿದ್ದರು. ತಂದೆ, ತಾಯಿ, ಪತ್ನಿ, ಪುತ್ರ ಹಾಗೂ ಸಹೋದರ ಇದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.