ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ರಾಜ್ಯ ಮುಖಂಡರ ಆದೇಶ ಬರುವವರೆಗೂ ಯಾವುದೇ ಪಕ್ಷವನ್ನು ಬೆಂಬಲಿಸಲ್ಲ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಂಡ್ರಿಗಿ ನಾಗರಾಜ್ ತಿಳಿಸಿದರು.
ಅವರು ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜೆಡಿಎಸ್ ಉಪ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕೆಂಬುದರ ಕುರಿತು ಈಗಾಗಲೇ ಸಂಗ್ರಹಿಸಿದ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರಿಗೆ ಕಳುಹಿಸಲಾಗಿದೆ. ಹೀಗಾಗಿ ಪಕ್ಷದ ಮುಖಂಡರಿಂದ ಆದೇಶ ಬರುವವರೆಗೂ ಯಾವುದೇ ಪಕ್ಷವನ್ನು ಬೆಂಬಲಿಸಲ್ಲ ಎಂದು ಹೇಳಿದರು.
ಮೀನಳ್ಳಿ ತಾಯಣ್ಣ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕುಡತಿನಿ ಶ್ರೀನಿವಾಸ್ ಮಾತನಾಡಿದರು. ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಪಿ.ಎಸ್. ಸೋಮಲಿಂಗನಗೌಡ, ಪಕ್ಷದ ಯುವ ಅಧ್ಯಕ್ಷ ಶ್ರೀಕಾಂತರೆಡ್ಡಿ, ಕಾರ್ಯದರ್ಶಿ ಡಾ. ಪಿ. ಜಗದೀಶ್ವರರೆಡ್ಡಿ ಹಾಗೂ ಕಾರ್ಯಕರ್ತರಾದ ಮಿಂಚು ಶ್ರೀನಿವಾಸ್, ಎಸ್. ವಿಘ್ನೇಶ್, ವಿಜಯಕುಮಾರಿ, ಮಂಜುನಾಥ ಗೌಡ, ಲಕ್ಷ್ಮಿಕಾಂತ ರೆಡ್ಡಿ ಪಾಲ್ಗೊಂಡಿದ್ದರು.
Advertisement