ವಿದ್ಯುನ್ಮಾನ ಮತಯಂತ್ರಗಳ ಪರಿಶೀಲನೆ

Updated on

ಬಳ್ಳಾರಿ: ಬಳ್ಳಾರಿ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಒ ಕಾರ್ಯ ನಡೆಯುತ್ತಿದ್ದು, ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು. ಎಡಿಸಿ ವೆಂಕಟೇಶ್ ಮಾತನಾಡಿ, ಜವಳಿ ಮತ್ತು ಕೈಮಗ್ಗ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ ನಾಯಕ ನೇತೃತ್ವದಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಮೊದಲ ಹಂತದಲ್ಲಿ ಎಲ್ಲ ಮತಯಂತ್ರಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಿ, ಚುನಾವಣಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗುವುದು. ಪ್ರಸ್ತುತ ಇವಿಎಂ ಮಿಶನ್‌ಗಳು ಸುಸ್ಥಿತಿಯಲ್ಲಿದ್ದು, ತಾಂತ್ರಿಕವಾಗಿ ಯಾವುದೇ ನ್ಯೂನತೆಗಳಾಗದಂತೆ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್‌ನ ಎಂಜಿನಿಯರ್‌ಗಳು ಪರಿಶೀಲಿಸುತ್ತಿದ್ದಾರೆ ಎಂದರು. ಜವಳಿ, ಕೈಮಗ್ಗ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ ನಾಯಕ ಇದ್ದರು.
ತುಂಬಿದ ತುಂಗಭದ್ರೆಗೆ ಬಾಗಿನ ಅರ್ಪಣೆ
ಹೊಸಪೇಟೆ: ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಎಚ್. ಅಬ್ದುಲ್ ವಹಾಬ್ ಅವರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ತುಂಗಭದ್ರಾ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿದರು. ಕಾಂಗ್ರೆಸ್ ಅಲ್ಪಸಂಖ್ಯಾರ ವಿಭಾಗದ ಅಧ್ಯಕ್ಷ ಅಬೀದ್ ಹುಸೇನ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಅಯ್ಯಾಳಿ ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ. ವೆಂಕಟರಮಣ, ಎಪಿಎಂಸಿ ಸದಸ್ಯ ತಮ್ಮನಳ್ಳಪ್ಪ, ಯುವ ಕಾಂಗ್ರೆಸ್ ಮುಖಂಡೆ ಮುನ್ನಿ, ಮಹಮದ್ ರಫೀಕ್, ಬಿಸಾಟಿ ಸೋಮಪ್ಪ, ಸಿ. ಕೃಷ್ಣ, ಜಿಲಾನ್, ಹೇಮಚಂದ್ರ, ಗೋವಿಂದ, ನಿಸಾರ್, ಪಂಪಾಪತಿ, ರಜಿಯಾಬೇಗಂ, ದೀಪ, ರತ್ನಮ್ಮ, ಮಂಜುಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗೌಳೇರಹಟ್ಟಿ ಕುಟಂಬಗಳಿಗೆ ನಿವೇಶನ ಹಕ್ಕು ಪತ್ರ ನೀಡಿ
ಹೊಸಪೇಟೆ: ನಗರದ ಗೌಳೇರಹಟ್ಟಿ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟಂಬಗಳಿಗೆ ನಿವೇಶನ ಹಕ್ಕುಪತ್ರ ನೀಡಬೇಕು ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಅಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ ಸಿಂಗ್ ಒತ್ತಾಯಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೌಸಿಯಾಬೇಗಂ, ಸರೋಜಾ ಸಿಂಗ್, ಮುಖಂಡರಾದ ಸೇತುರಾಮ ವಿಗ್ಗಾಲಿ, ನಾರಾಯಣ ಸ್ವಾಮಿ, ಮಂಜುನಾಥ, ವೇಣುಗೋಪಾಲ ವೈದ್ಯ, ನಾಗರಾಜ ಗೌಳಿ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com