ಗುಣಾತ್ಮಕ ಶಿಕ್ಷಣ ನೀಡಿ

Updated on: 

ಹೊಸಪೇಟೆ: ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಶಿಕ್ಷಕರು ಅತ್ಯಂತ ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಹಾಗೂ ಆಸಕ್ತಿಯಿಂದ ಬೋಧಿಸಿದಾಗ ಮಾತ್ರ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಹೇಳಿದರು.
ನಗರದ ಮಹಿಳಾ ಸಮಾಜ ಶಾಲೆಯಲ್ಲಿ ಶಿಕ್ಷಕರಿಗೆ ನಿರಂತರ ಮೌಲ್ಯಮಾಪನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಕರು ಸಂಪೂರ್ಣ ಮಾಹಿತಿ ಪಡೆದುಕೊಂಡು, ಪಠ್ಯದ ಸಿದ್ಧತೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಾಗಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಎಸ್ಸೆಸ್ಸೆಲ್ಸಿ ಹಂತ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸಂಪನ್ಮೂಲ ಶಿಕ್ಷಕ ಮಾಧವಿ, ಮಂಜಪ್ಪ ಘಂಟಿ, ನಾಗರಾಜ, ಶಿಕ್ಷಕರ ಮಾರ್ಗದರ್ಶಿ ಅನಂತಯ್ಯ ಚೌಧರಿ, ಬಸವರಾಜ ಜತ್ತಿ, ಬಸವರಾಜಪ್ಪ, ಮುಖ್ಯಶಿಕ್ಷಕಿ ಪದ್ಮನಿರಾವ್ ಸೇರಿದಂತೆ ಇತರರು ಇದ್ದರು.  ಸ್ವಾತಿ ಪ್ರಾರ್ಥಿಸಿದರು. ಆರ್. ರಮಾ ಸ್ವಾಗತಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com