ಸರ್ಕಾರದ ಮೇಲೆ ಅವಲಂಬನೆ ಬೇಡ

Updated on: 

ಹಗರಿಬೊಮ್ಮನಹಳ್ಳಿ: ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸಿರುವ ಸಂಖ್ಯೆ ಈಚೆಗೆ ಹೆಚ್ಚಾಗುತ್ತಿದೆ. ಇದು ಸರಿಯಲ್ಲ. ಈ ಸಮಾಜದ ಭಾಗವಾಗಿರುವ ನಮಗೂ ನಮ್ಮದೆಯಾದ ಹಲವು ಕರ್ತವ್ಯಗಳಿವೆ ಎಂದು ಸ್ಥಳೀಯ ಮೈತ್ರಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಮರನಾಥ್ ಚದ್ರಿ ಹೇಳಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಂತ್ರಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ವಿವೇಕಾನಂದ ಸೇವಾಶ್ರಮ ಕಣ್ಣಾಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಕಣ್ಣು ಪರೀಕ್ಷೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಕಣ್ಣು ದೇಹದ ಅತಿ ಮುಖ್ಯ ಅಂಗ. ಇದರ ಕಾಳಜಿ, ಸಂರಕ್ಷಣೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಆಶಯಗಳನ್ನಿಟ್ಟುಕೊಂಡು ಇವತ್ತು ನಮ್ಮ ಸಂಸ್ಥೆ ಕಾರ್ಯಾರಂಭ ಮಾಡಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಸುಲೋಚನ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ  ಪರಮೇಶ್ವರಯ್ಯ ಸೊಪ್ಪಿಮಠ, ಎಸ್ಡಿಎಂಸಿ ಅಧ್ಯಕ್ಷ ಬೆಳ್ಳಕ್ಕಿ ರಾಮಪ್ಪ, ಮುಖ್ಯಗುರು ಕೆ.ಎನ್.ಪ್ರಭಾಕರರಾವ್, ಬಿಆರ್ಪಿ ಎಚ್.ಎಂ. ವನಿತಾ, ಕಣ್ಣು ಪರೀಕ್ಷಕ ಶರತ್ಕುಮಾರ್, ವೈದ್ಯ ಮಲ್ಲಿಕಾರ್ಜುನ  ಎಚ್.ಎಂ., ಆಶಾ ಚಿಕ್ಕಮಠ, ಜೆ. ಪ್ರತಿಭಾ, ಕೆ. ಅನಿತಾ, ಎಂ.ಡಿ. ಮಂಜುಳಾ, ಜೆ. ಈರಮ್ಮ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com