ಕನ್ನಡಪ್ರಭ ವಾರ್ತೆ, ಕಂಪ್ಲಿ, ಜು. 27
ಹಿಂದು-ಮುಸ್ಲಿಂ ಸಮಾಜ ಬಾಂಧವರು ಹಬ್ಬಗಳನ್ನು ಭಾವೈಕ್ಯತೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಬಿ.ಎನ್. ಲಾವಣ್ಯ ತಿಳಿಸಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಂಜಾನ್ ಹಬ್ಬದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಭಾಗದ ಹಿಂದೂ-ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದಿರುವುದು ಸಂತಸ ತಂದಿದೆ. ಮುಂದೆಯೂ ಇದೇ ರೀತಿ ಭಾವೈಕ್ಯ, ಭ್ರಾತೃತ್ವ ಭಾವದಿಂದ ಇದ್ದು, ಹಬ್ಬಗಳನ್ನು ಆಚರಿಸಲು ಮುಂದಾಗಬೇಕು. ರಂಜಾನ್ ಹಬ್ಬದ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ಹಿಂದೂ-ಮುಸ್ಲಿಂ ಹಿರಿಯ ಮುಖಂಡರು ಮಾತನಾಡಿ, ಹಿಂದು-ಮುಸ್ಲಿಂ ಹಬ್ಬಗಳನ್ನು ಕೋಮು ಗಲಭೆಗಳಿಲ್ಲದಂತೆ ಭಾವೈಕ್ಯದಿಂದ ಆಚರಿಸಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲೂ ಎಲ್ಲ ಹಬ್ಬಗಳನ್ನು ಪರಸ್ಪರ ಸಹಕಾರದಿಂದ ಆಚರಿಸುತ್ತೇವೆ ಎಂದು ಭರವಸೆ ನೀಡಿದರು.
ಪಿಎಸ್ಐ ಡಿ. ಹುಲುಗಪ್ಪ, ಪುರಸಭೆ ಸದಸ್ಯರಾದ ಎಂ. ಸುಧೀರ್, ಎನ್. ರಾಮಾಂಜನೇಯಲು, ಸಿ.ಆರ್. ಹನುಮಂತ, ಬಿ. ನಾಗರಾಜ, ಎಸ್. ರಾಘವೇಂದ್ರ, ವಿ. ರಘುನಾಯಕ, ಸಣ್ಣ ಹುಲುಗಪ್ಪ, ಎಪಿಎಂಸಿ ನಿರ್ದೇಶಕ ಎನ್. ಪುರುಷೋತ್ತಮ, ಹಿರಿಯ ಮುಖಂಡರಾದ ಕೆ.ಎಂ. ಹೇಮಯ್ಯಸ್ವಾಮಿ, ಪಿ. ಬ್ರಹ್ಮಯ್ಯ, ಬಿ. ಸಿದ್ದಪ್ಪ, ಬಿ. ಈರಪ್ಪ, ಎಂ.ಸಿ. ಮಾಯಪ್ಪ, ಕೆ. ಮೆಹಬೂಬ್, ಎನ್. ಹಬೀಬ್ ರೆಹಮಾನ್, ಸೈಯದ್ ಉಸ್ಮಾನ್, ಡಾ. ವೆಂಕಟೇಶ, ಕೆ. ಮನೋಹರ್, ಅಯೋದಿ ವೆಂಕಟೇಶ, ಎ.ಸಿ. ದಾನಪ್ಪ, ಡಿ. ವೀರಣ್ಣ, ಯಾಳ್ಪಿ ಅಬ್ದುಲ್ ಮುನಾಫ್ ಇತರರಿದ್ದರು.